ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಪಾನೀರ್: ಪ್ರಾಯವಾಗುತ್ತಿದ್ದಂತೆ ಒಂದೊಂದೇ ಕಾಯಿಲೆ ಮನುಷ್ಯನನ್ನು ಭಾದಿಸಲಿದ್ದು ನಿಗದಿತ ಸಮಯದಲ್ಲಿ ವೈದ್ಯರನ್ನು ಕಂಡು ಪರೀಕ್ಷಿಸಿದಲ್ಲಿ ಆರೋಗ್ಯ ಸ್ಥಿರವಾಗಿಡಲು ಸಾಧ್ಯ ಎಂದು ನಿಟ್ಟೆ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಡಾ.ಲ್ಯಾನ್ಸಿ ಲೋಬೋ ಹೇಳಿದರು.
ಉಳ್ಳಾಲ ಪಾನೀರ್ ಪಾವ್ಲ್ ಸಭಾ ವತಿಯಿಂದ ಭಾನುವಾರ ಪಾನೀರ್ ಮೆರ್ಸಿಯಮ್ಮ ಚರ್ಚ್ ಸಭಾಂಗಣದಲ್ಲಿ ನಡೆದ ಹಿರಿಯರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾನೀರ್ ಮೆರ್ಸಿಯಮ್ಮ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಮಾತನಾಡಿ, ನಮ್ಮಲ್ಲಿ ವಿವಿಧ ದಿನಗಳನ್ನು ಆಚರಿಸಲಾಗುತ್ತಿದ್ದು ಈ ನಿಟ್ಟಿನಲ್ಲಿ ಹಿರಿಯ ದಿನ ಆಚರಿಸಲಾಗುತ್ತಿರುವುದು ಹೆಮ್ಮೆಯ ವಿಚಾರ. ಹಿರಿಯರ ಸೇವೆ ಚರ್ಚ್, ಸಮಾಜಕ್ಕೆ ಹೆಚ್ಚಿನ ಅಗತ್ಯವಿದೆ ಎಂದರು.
ಪಾನೀರ್ ಚರ್ಚ್ ಧರ್ಮಗುರು ರೆ.ಡೆನ್ನಿಸ್ ಸುವಾರಿಸ್, ಪೀಟರ್ ನೊರೊನ್ಹ, ಬ್ರದರ್ ನೀಲೇಶ್ ಕ್ರಾಸ್ತ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಫಿಲಿಪ್ ಡಿಸೋಜ, ಪಾವ್ಲ್ ಸಭಾ ಕಾರ್ಯದರ್ಶಿ ಪ್ಯಾಟ್ರಿಕ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
ಪಾವ್ಲ್ ಸಭಾ ಅಧ್ಯಕ್ಷ ಜಾನ್ ಪಾಯ್ಸ್ ಸ್ವಾಗತಿಸಿದರು. ಸದಸ್ಯ ನೆಲ್‍ರಾಯ್ ಪಿರೇರ ಕಾರ್ಯಕ್ರಮ ನಿರೂಪಿಸಿದರು.