Site icon Ullalavani

ಪಜೀರು ಚರ್ಚ್ ಕಳವು ಪ್ರಕರಣ :ಇಬ್ಬರು ವಶಕ್ಕೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಪಜೀರು: ಪಜೀರು ಸಂತ ಮರ್ಸಿಯಮ್ಮನವರ ಚರ್ಚಿನಿಂದ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಇಬ್ಬರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.

ಉಳ್ಳಾಲ ನಿವಾಸಿಗಳಾದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ. ಐದು ಮಂದಿಯ ತಂಡ ಕೃತ್ಯದಲ್ಲಿ ಭಾಗಿಯಾಗಿದ್ದು, ವಶಕ್ಕೆ ಪಡೆದುಕೊಂಡಿರುವ ಇಬ್ಬರೂ ಕಳ್ಳರ ಜತೆಗೆ ಮೊಬೈಲಿನಲ್ಲಿ ಸಂಭಾಷಣೆ ನಡೆಸಿರುವ ಮಾಹಿತಿ ಆಧಾರದಲ್ಲಿ ಪತ್ತೆ ಹಚ್ಚಲಾಗಿದೆ. ಪ್ರಮುಖ ಆರೋಪಿಗಳು ಮಲಾರ್ ಮತ್ತು ಹರೇಕಳ ಮೂಲದವರೆಂದು ತಿಳಿದುಬಂದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕಳೆದ ಸೋಮವಾರ ಮಧ್ಯರಾತ್ರಿ ಚರ್ಚ್‍ನ ಚಿಲಕವನ್ನು ಮುರಿದು ಒಳನುಗ್ಗಿದ ಕಳ್ಳರು ದೇವರ ಪೂಜಾ ಸಾಮಗ್ರಿ, ಲ್ಯಾಪ್‍ಟ್ಯಾಪ್ ಸಹಿತ
ಕಳೆದ ದಶಂಬರ್ 15ರಂದು ಉದ್ಘಾಟನೆಗೊಂಡ ಪಜೀರಿನ ಸಂತ ಮೇರಿಯಮ್ಮನವರ ನೂತನ ಚರ್ಚ್ ಪೂರ್ವ ದಿಕ್ಕಿನ ದೊಡ್ಡ ಬಾಗಿಲಿನ ಮುರಿದು ಒಳನುಗ್ಗಿದ ಕಳ್ಳರು 25ಸಾವಿರ ರೂ. ಮೌಲ್ಯದ ಪರಮ ಪ್ರಸಾದ ಇಡುವ ಪೆಟ್ಟಿಗೆ(ಟ್ಯಾಬರ್‍ನೆಕಲ್), ಚರ್ಚ್ ಹೊರಗಡೆ ಹಾಗೂ ಒಳಗಡೆ ಇದ್ದ 18ಸಾವಿರ ರೂ. ಮೌಲ್ಯದ ಪರಮ ಪ್ರಸಾದ ವಿತರಿಸುವ 9ಪಾತ್ರೆಗಳು(ಸಿಬೋರಿಯಂ), ಪೂಜೆಗೆ ಪ್ರಯೋಗ ಮಾಡುವ 10ಸಾವಿರ ರೂ. ಮೌಲ್ಯದ ಎರಡು ದೊಡ್ಡ ಹಾಗೂ ಎರಡು ಸಣ್ಣ ಪಾತ್ರೆ(ಚಾಲಿಸ್) ಹಾಗೂ 25ಸಾವಿರ ರೂ. ಮೌಲ್ಯದ ಏಸರ್ ಲ್ಯಾಪ್ ಟ್ಯಾಪ್ ಕಳವಾಗಿದ್ದು ಕಳವಾದ ಸೊತ್ತಿನ ಒಟ್ಟು ಮೌಲ್ಯ ಸುಮಾರು 70ಸಾವಿರ ರೂ. ಗಳೆಂದು ಅಂದಾಜಿಸಲಾಗಿದೆ.

ಟ್ಯಾಬರ್‍ನೆಕಲ್ ಪತ್ತೆ: ಮಂಗಳವಾರ ಸಂಜೆ ವೇಳೆ ಹರೇಕಳ ಸಮೀಪ ಪರಮ ಪ್ರಸಾದ ಇಡುವ ಪೆಟ್ಟಿಗೆ ಪತ್ತೆಯಾಗಿತ್ತು. ಚಿನ್ನದ್ದೆಂದು ನಂಬಿದ್ದ ಕಳ್ಳರು ಅದನ್ನು ಹೊತ್ತೊಯ್ದು ಬಳಿಕ ಅದು ಚಿನ್ನದ ಬಣ್ಣ ಮಾತ್ರ ಇರುವುದನ್ನು ಗಮನಿಸಿ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆನ್ನಲಾಗಿದೆ.

Exit mobile version