Site icon Ullalavani

ಅಮೀರ್ ಖಾನ್ ಗೆ ಕಪಾಳ ಮೋಕ್ಷ ಮಾಡಿದ್ರೆ ಶಿವಸೇನೆಯಿಂದ 1 ಲಕ್ಷ

ಚಂಡೀಗಢ್: ಅಸಹಿಷ್ಣುತೆ ಕುರಿತು ಬಾಲಿವುಡ್ ನಟ ಅಮಿರ್ ಖಾನ್ ಹೇಳಿಕೆ ವಿಚಾರದಲ್ಲಿ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ  ಅಮೀರ್ ಖಾನ್ ನನಗೆ ಮತ್ತು ನನ್ನ ಕುಟುಂಬಕ್ಕೆ ದೇಶ ತೊರೆಯುವ ಯಾವುದೇ ಉದ್ದೇಶ ಇಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂಬ  ಸ್ಪಷ್ಟನೆ ಈಗಾಗಲೇ ಕೊಟ್ಟಿದ್ದಾರೆ.

ಆದರೆ ಖಾನ್  ಹೇಳಿಕೆ ವಿರುದ್ಧದ ಪ್ರತಿಭಟನೆ, ಆಕ್ರೋಶ ಮಾತ್ರ ಇನ್ನು ನಿಂತಿಲ್ಲ, ಇದರ ಬೆನ್ನಲ್ಲೇ ಶಿವಸೇನೆ ಇದೀಗ ಹೊಸದೊಂದು ಆಫರ್ ಕೊಟ್ಟಿದೆ. ಯಾರೇ ಆಗಲಿ ಅಮೀರ್ ಖಾನ್ ಕಪಾಳಕ್ಕೆ ಬಾರಿಸಿದ್ರೆ ಅವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ಕೊಡುವುದಾಗಿ ಶಿವಸೇನೆ ಪಂಜಾಬ್ ಘಟಕದ ಅಧ್ಯಕ್ಷ ರಾಜೀವ್ ಟಂಡನ್ ಘೋಷಿಸಿರುವುದಾಗಿ ಗುರುವಾರ ಮಾಧ್ಯಮದ ವರದಿ ತಿಳಿಸಿದೆ.

ಬುಧವಾರ ಲೂಧಿಯಾನದ ಎಂಬಿಡಿ ರಾಡಿಸನ್ ಬ್ಲೂನ ಹೊರಭಾಗದಲ್ಲಿ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅಮೀರ್ ಖಾನ್ ಮುಂಬರುವ ಸಿನಿಮಾ ಶೂಟಿಂಗ್ ಹಿನ್ನೆಲೆಯಲ್ಲಿ ರಾಡಿಸನ್ ಬ್ಲೂನಲ್ಲಿ ವಾಸ್ತವ್ ಹೂಡಿರುವುದನ್ನು ತಿಳಿದು ಶಿವಸೇನೆ ಪ್ರತಿಭಟನೆಗಿಳಿದಿತ್ತು.

ಪ್ರತಿನಿತ್ಯ ದಿನಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಅಸಹಿಷ್ಣುತೆ ಕುರಿತ ಸುದ್ದಿಗಳು ಕಿರಣ್ ಅವರ ಮನಸ್ಸಿನ ಮೇಲೆ ಅಘಾದ ಪರಿಣಾಮವನ್ನು ಉಂಟು ಮಾಡಿದ್ದು, ಅವರು ತೀವ್ರ ಆತಂಕಕ್ಕೊಳಗಾಗಿದ್ದಾರೆ ಎಂದು ಆಮಿರ್ ಖಾನ್ ಹೇಳಿದ್ದರು. ಅಲ್ಲದೆ ಅಸಹಿಷ್ಣುತೆ ವಿರುದ್ಧ ಸಾಹಿತಿಗಳು ನಡೆಸುತ್ತಿರುವ ಪ್ರತಿಭಟನೆಗೂ ಆಮಿರ್ ಖಾನ್ ಅವರು ತಮ್ಮ ಬೆಂಬಲ ಸೂಚಿಸಿದ್ದರು.

Exit mobile version