Site icon Ullalavani

ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಮಕ್ಕಳ ದಿನಾಚರಣೆಗಳು ಪೂರಕ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಚೆಂಬುಗುಡ್ಡೆ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಮಕ್ಕಳ ದಿನಾಚರಣೆಗಳು ಪೂರಕ, ಸಿಗವ ಅವಕಾಶವನ್ನು ಮಕ್ಕಳು ಉಪಯೋಗಿಸುವ ಮೂಲಕ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ  ಎಂದು ಉಳ್ಳಾಲ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸುಹಾಸಿನಿ ಬಬ್ಬುಕಟ್ಟೆ ಅಭಿಪ್ರಾಯಪಟ್ಟರು.

ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಚೆಂಬುಗುಡ್ಡೆಯ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾದ ಮಕ್ಕಳ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಮಕ್ಕಳಲ್ಲಿ ಹಿಂಜರಿಕೆಗಳು ಹೆಚ್ಚಾಗಿ ಇರುತ್ತದೆ. ಇದರಿಂದ ಅವರಲ್ಲಿರುವ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗುವುದಿಲ್ಲ. ಹೆತ್ತವರು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುವ ಮೂಲಕ ಸಿಗುವ ಅವಕಾಶವನ್ನು ಉಪಯೋಗಿಸುವಂತಹ ಧೈರ್ಯವನ್ನು ತುಂಬಬೇಕು ಎಂದರು.

ಉಳ್ಳಾಲ ಪುರಸಭೆ ಮಾಜಿ ಅಧ್ಯಕ್ಷ ಬಾಝಿಲ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಚೆಂಬುಗುಡ್ಡೆ ಮಹಾಂಕಾಳಿ ದೈವಸ್ಥಾನದ ಆಡಳಿತ ಮೊಕ್ತೇಸರ ಸೋಮಯ್ಯ ಕುಮಾರ್, ಚೆಂಬುಗುಡ್ಡೆ ದಲಿತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸುಂದರ್.ಯಸ್, ಹಿರಿಯ ನಾಗರಿಕೆ ಶಶಿಕಲಾ, ಶ್ರೀ ಕೃಷ್ಣ ಭಜನಾ ಮಂದಿರದ ಮಾಜಿ ಅಧ್ಯಕ್ಷ ಹರಿಶ್ಚಂದ್ರ ಉಪಸ್ಥಿತರಿದ್ದರು.

ಅಂಗನವಾಡಿ ಶಿಕ್ಷಕಿ ಆರ್.ಮೀನಾ ಸ್ವಾಗತಿಸಿ, ವಂದಿಸಿದರು.

Exit mobile version