Site icon Ullalavani

ಒಂಭತ್ತನೇ ವಾರ್ಷಿಕೋತ್ಸವ ಮತ್ತು ಮಕ್ಕಳ ದಿನಾಚರಣೆ

ಉಳ್ಳಾಲ:  ಸಂಘಟನೆಗಳು ಸಮಾಜಮುಖಿ ಕಾರ್ಯಗಳನ್ನು  ಮಾಡುವ ಮೂಲಕ  ಸಮಾಜದಲ್ಲಿ ಆತ್ಮೀಯತೆ, ಸೌಹಾರ್ದತೆ, ಸಾಮರಸ್ಯವನ್ನು ಬೆಳೆಸುವ ಕಾರ್ಯವನ್ನು  ಮಾಡಬೇಕಿದ್ದು, ಈ ನಿಟ್ಟಿನಲ್ಲಿ  ಸತತ ಒಂಭತ್ತು ವರ್ಷಗಳಿಂದ  ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಸೌಹಾರ್ದ ಯುವಕ ಮಂಡಲ ಇತರೆ ಸಂಘಟನೆಗಳಿಗೆ ಮಾದರಿ ಎಂದು ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರು ಫಾ. ಜೆ.ಬಿ.ಸಲ್ದಾನ್ಹ ಅಭಿಪ್ರಾಯಪಟ್ಟರು.

ಅವರು ಸೋಮೇಶ್ವರದ ನೆಹರುನಗರದ ವೇದಿಕೆಯಲ್ಲಿ ಶನಿವಾರ ನೆಹರುನಗರದ ಸೌಹಾರ್ದ ಯುವಕ ಮಂಡಲದ ಒಂಭತ್ತನೇ ವಾರ್ಷಿಕೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಆತ್ಮೀಯತೆ, ಸೌಹಾರ್ದತೆ ಕಡಿಮೆಯಾಗುತ್ತಿದೆ. ಇದನ್ನು ಯುವಮನಸ್ಸುಗಳಲ್ಲಿ ಬೆಳೆಸುವ ಸಲುವಾಗಿ ಸಂಘಟನೆಗಳು ಶ್ರಮಿಸಬೇಕಿದೆ. ಸದಾ ಎಲ್ಲಾ ವರ್ಗದ ಜನರಿಗೆ ಉಪಯುಕ್ತವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟನೆ ಸಮಾಜಮುಖಿ ಎನಿಸಿಕೊಳ್ಳಲು ಸಾಧ್ಯ ಎಂದರು.
ದಾಯ್ಜಿವಲ್ಡ್ ್ ಸುದ್ಧಿವಾಹಿನಿಯ ಪ್ರೊಡಕ್ಷನ್ ಮೆನೇಜರ್ ನಿಸಾರ್ ಅಹಮ್ಮದ್ ಮಾತನಾಡಿ ಯುವಜನಾಂಗದಲ್ಲಿ ಆತ್ಮವಿಶ್ವಾಸ ಕಡಿಮೆಯಾಗುತ್ತಿದೆ. ಅದನ್ನು ಬೆಳೆಸುವ ಪ್ರಯತ್ನ ಎಲ್ಲರಿಂದ ಆಗಬೇಕಿದೆ. ಕೆಲಸದ ಜಂಜಾಟದಲ್ಲಿ ಎಲ್ಲವನ್ನು ಮರೆತು ಬಿಡುತ್ತಿದ್ದೇವೆ, ಆದರೆ ಅದರ ನಡುವೆ ಸಮಾಜಮುಖಿ ಕೆಲಸಗಳನ್ನು ಮೈಗೂಡಿಸಿಕೊಂಡು, ಸಂಘಟನೆಗಳ ಮೂಲಕ ಅದನ್ನು ಕಾರ್ಯಗತ ಮಾಡಬೇಕು ಎಂದರು.

ಪಶ್ಚಿಮ್ ರಿ-ಹಾಬ್ ಚಾರಿಟೇಬಲ್ ಟ್ರಸ್ಟ್ ನ ಆಡಳಿತಾಧಿಕಾರಿ ರೋಹಿತ್ ಸಾಂಕ್ತುನ್, ಸೋಮೇಶ್ವರ ಗ್ರಾ.ಪಂ ಸದಸ್ಯ ಮಾಧವ ಗಟ್ಟಿ ಹಾಗೂ ಯುವಕ ಮಂಡಲದ ಅಧ್ಯಕ್ಷ ಜೈಸನ್ ಡಿಸೋಜಾ ಉಪಸ್ಥಿತರಿದ್ದರು.

ಈ ವೇಳೆ ಸಮುದ್ರ ತೀರದಲ್ಲಿ ಹಲವು ಜೀವಗಳನ್ನು ರಕ್ಷಿಸಿರುವ ಜೀವರಕ್ಷಕರಾದ ಅಶೋಕ್ ಸೋಮೇಶ್ವರ, ಮೋಹನ್ ಚಂದ್ರ ಸೋಮೇಶ್ವರ, ಕಿರಣ್ ಒಂಭತ್ತುಕೆರೆ, ವೆಂಕಟೇಶ್ ಸೋಮೇಶ್ವರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು.

 

Exit mobile version