Site icon Ullalavani

ರಾಜ್ಯಮಟ್ಟದ ಜ್ಯೂನಿಯರ್ ಮತ್ತು ಮಾಸ್ಟರ್ ಪವರ್ ಲಿಪ್ಟಿಂಗ್ ಸ್ಪರ್ಧೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ:  ಕುಂದಾಪುರದಲ್ಲಿ ಜರಗಿದ ರಾಜ್ಯಮಟ್ಟದ  ಜ್ಯೂನಿಯರ್ ಮತ್ತು ಮಾಸ್ಟರ್ ಪವರ್ ಲಿಪ್ಟಿಂಗ್ ಸ್ಪರ್ಧೆಯ 74 ಕೆ.ಜಿ ವಿಭಾಗದಲ್ಲಿ  ಹೇಮಚಂದ್ರ ಬಬ್ಬುಕಟ್ಟೆ ಇವರು ರಜತ ಪದಕವನ್ನು ಪಡೆದುಕೊಂಡಿದ್ದಾರೆ. ಇವರು   ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ  ಸದಸ್ಯರಾಗಿದ್ದು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.  ದಿ.ಶೇಖರ್ ಬಂಗೇರ ಇವರ ಶಿಷ್ಯರಾಗಿದ್ದಾರೆ.

83 ಕೆ.ಜಿ ವಿಭಾಗದಲ್ಲಿ  ದಾಮೋದರ ಆಚಾರ್ಯ ಇವರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಇವರು   ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ  ಸದಸ್ಯರಾಗಿದ್ದು, ದಿ.ಶೇಖರ್ ಬಂಗೇರ ಇವರ ಶಿಷ್ಯರಾಗಿದ್ದಾರೆ.

59 ಕೆ.ಜಿ ವಿಭಾಗದಲ್ಲಿ  ಗಣೇಶ್ ಕುಲಾಲ್ ಇವರು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಇವರು   ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ  ಸದಸ್ಯರಾಗಿದ್ದು, ದಿ.ಶೇಖರ್ ಬಂಗೇರ ಇವರ ಶಿಷ್ಯರಾಗಿದ್ದಾರೆ.

83 ಕೆ.ಜಿ ವಿಭಾಗದಲ್ಲಿ ಜಗದೀಶ ಸುಲಾಯ ಉಳ್ಳಾಲ್ ಇವರು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಇವರು   ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ  ಸದಸ್ಯರಾಗಿದ್ದು, ದಿ.ಶೇಖರ್ ಬಂಗೇರ ಇವರ ಶಿಷ್ಯರಾಗಿದ್ದಾರೆ.

 

Exit mobile version