Site icon Ullalavani

ರಾಜ್ಯ ಮಟ್ಟದ ಪ್ರತಿಭೋತ್ಸವ ಸ್ಪರ್ಧೆ

ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೇಡರೇಶನ್ ಇದರ ವತಿಯಿಂದ ಇತ್ತೀಚೆಗೆ ಅಲ್ ಮದೀನಾ ಮಂಜನಾಡಿಯಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭೋತ್ಸವ ಸ್ಪರ್ಧೆ ಯಲ್ಲಿ ಅಳೇಕಲದ ರಫೀಕ್ ಹಾಗೂ ಝೊಹರಾ ದಂಪತಿ ಪುತ್ರರಾದ ಮಾಸ್ಟರ್‍ಮುಹಮ್ಮದ್ ಇಸ್ಥಿಹಾಕ್, ಅಬ್ದುಲ್ ಹಮೀದ್ ಹಾಗೂ ಮೈಮೂನ ದಂಪತಿ ಪುತ್ರರಾದ ಮಾಸ್ಟರ್‍ಮುಹಮ್ಮದ್ ಹಫೀಪ್ ಮತ್ತು ಮುಹಮ್ಮದ್ ಹನೀಫ್ ಹಾಗೂ ನಫೀಸಾ ದಂಪತಿ ಪುತ್ರರಾದ ಮಾಸ್ಟರ್‍ ಮುಹಮ್ಮದ್ ನಈಮ್ ಹುಸೈನ್ ಪ್ರಥಮ ಸ್ಥಾನಗಳಿಸಿರುತ್ತಾರೆ ಎಂದು ಎಸ್ಸೆಸ್ಸೆಫ್ ಅಳೇಕಲ ಶಾಖೆಯ ಅಧ್ಯಕ್ಷರಾದ ಶಂಸುದ್ದೀನ್ ಅಳೇಕಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Exit mobile version