Site icon Ullalavani

ಚೀನಾ: ಕಲ್ಲಿದ್ದಲು ಗಣಿಯಲ್ಲಿ ಅಗ್ನಿದುರಂತ ೨೧ ಮಂದಿ ಸಾವು

ಬೀಜಿಂಗ್‌: ಕಲ್ಲಿದ್ದಲು ಗಣಿಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 21 ಮಂದಿ ಕಾರ್ಮಿಕರು ದಾರುಣ ಸಾವನ್ನಪ್ಪಿರುವ ಘಟನೆ ಚೀನಾದ ಹಿಲಾಂಗ್‌ಜಿಯಾಂಗ್‌ ಪ್ರಾಂತ್ಯದಲ್ಲಿ ನಡೆದಿದೆ.

ಹಿಲಾಂಗ್‌ಜಿಯಾಂಗ್‌ನ ಜಿಕ್ಸಿ ಪಟ್ಟಣದಲ್ಲಿರುವ ಈ ಕಲ್ಲಿದ್ದಲು ಗಣಿ ಸರ್ಕಾರಿ ಸ್ವಾಮ್ಯದ ಲಾಂಗ್ಮೆ ಮೈನಿಂಗ್‌ ಹೋಲ್ಡಿಂಗ್‌ ಸಮೂಹಕ್ಕೆ ಸೇರಿದ್ದು,ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದೆ.ಘಟನೆಯಲ್ಲಿ ಸುಟ್ಟು ಕರಕಲಾದ 21 ಮೃತದೇಹಗಳನ್ನು ಶನಿವಾರ ಪತ್ತೆ ಹಚ್ಚಲಾಗಿದೆ.

ಘಟನೆ ನಡೆದಾಗ ಗಣಿಯಲ್ಲಿ 38 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇವರಲ್ಲಿ 16 ಮಂದಿ ದುರಂತದಿಂದ ತಪ್ಪಿಸಿಕೊಂಡಿದ್ದಾರೆ.

ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಗಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕ್ಷಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

Exit mobile version