Site icon Ullalavani

ಮನಿಹಳ್ಳ ಹರೀಶ್ ಕೊಲೆ ಪ್ರಕರಣ: ಇಬ್ಬರ ಬಂಧನ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಬಂಟ್ವಾಳ: ಬಂಟ್ವಾಳದ ಮನಿಹಳ್ಳದಲ್ಲಿ ನಡೆದ ಹರೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಇಂದು ಬಂಟ್ವಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಭುವಿತ್ ಶೆಟ್ಟಿ(25) ಮತ್ತು ಅಚ್ಯುತ್(28) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನು ಮೂರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಈ ಬಂಧನದ  ಬಗ್ಗೆ  ಐಜಿಪಿ ಅಮೃತ್ ಪಾಲ್ ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ್ದು, ಆರೋಪಿಗಳು ಕೂಡ ಬಂಟ್ವಾಳ ನಗರ ಠಾಣೆಯ ರೌಡಿಶೇಟರುಗಳು ಎಂದು ತಿಳಿದುಬಂದಿದೆ.

ಆರೋಪಿ ಭುವಿತ್ ಶೆಟ್ಟಿ ಎಂಬಾತ ಈ ಹಿಂದೆ ಟ್ವಿಟರ್‍ನಲ್ಲಿ ಕಲುಬುರ್ಗಿ ಹತ್ಯೆಯನ್ನು ಸಮರ್ಥಿಸಿ ಬಂಟ್ವಾಳ ಪೊಲೀಸರಿಂದ ಬಂಧಿತನಾಗಿದ್ದನು.

ನವೆಂಬರ್ 12ರಂದು ಸಂಜೆ ತನ್ನ ಮುಸ್ಲಿಂ ಗೆಳೆಯ ಶಮೀವುಲ್ಲಾ ಎಂಬಾತನ ಜೊತೆ ಮನೆಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದು, ಘಟನೆಯಲ್ಲಿ ಹರೀಶ್ ಸಾವನ್ನಪ್ಪಿದ್ದು, ಶಮೀವುಲ್ಲಾ ಗಂಭೀರಗಾಯಗೊಂಡು ನಗರದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಈ ಹತ್ಯೆಯನ್ನು ಖಂಡಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಮಂಗಳೂರು ಬಂದ್ ನಡೆಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

Exit mobile version