Site icon Ullalavani

ಉಳ್ಳಾಲ: ಬಿಗು ಬಂದೋಬಸ್ತ್ ಪಥ ಸಂಚಲನ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ : ಉಳ್ಳಾಲದಲ್ಲಿ ಆಹಿತಕರ ಘಟನೆಗಳು ಮುಂದುವರೆದಿದ್ದು ಭಾನುವಾರ ಮೊಗವೀರಪಟ್ಣದಲ್ಲಿ ದುಷ್ಕಮಿಗಳು ಬಸ್ಸೊಂದಕ್ಕೆ ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಸಂಜೆ ವೇಳೆಗೆ ಉಳ್ಳಾಲದಲ್ಲಿ ಬಿಗು ಬಂದೋಬಸ್ತ್ ಮುಂದುವರೆದಿದ್ದು ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ಕೆಎಸ್‍ಆರ್‍ಪಿ ಪಡೆ ಪಥ ಸಂಚಲನ ನಡೆಸಿತು.

ಮಧ್ಯಾಹ್ನದ ವೇಳೆಗೆ ಉಳ್ಳಾಲ ಕೋಟೆಪುರದಿಂದ ಸೀರೋಡ್ ಆಗಿ ಮೊಗವೀರಪಟ್ಣ ಬಳಿ ಬರುತ್ತಿದ್ದ ಶಾಲಿಮಾರ್ ಬಸ್ಸಿನ ಮುಂದಿನ ಗಾಜಿಗೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದು ಬಸ್ಸಿನ ಮುಂದಿನ ಗಾಜು ಸಂಪೂರ್ಣ ಹಾನಿಯಾಗಿದೆ. ಈ ಸಂದರ್ಭದಲ್ಲಿ ಬಸ್ಸಿನಲ್ಲಿ ಪ್ರಯಾಣಿಕರು ಯಾರು ಇರಲಿಲ್ಲ ಎನ್ನಲಾಗಿದೆ.

ಬಿಗು ಬಂದೋಬಸ್ತ್ ಪಥ ಸಂಚಲನ :

ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಆಹಿತಕರ ಘಟನೆಯಿಂದ ಉಳ್ಳಾಲದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದ್ದು ಭಾನುವಾರ ಕ್ಷಿಪ್ರ ಕಾರ್ಯಾಚರಣೆ ಪಡೆ, ಕೆ.ಎಸ್.ಆರ್.ಪಿ. ಮತ್ತು ಸ್ಥಳೀಯ ಪೆÇಲೀಸರು ಪಥ ಸಂಚಲನ ನಡೆಸಿದರು. ಪಥ ಸಂಚಲನವು ಉಳ್ಳಾಲ ಅಬ್ಬಕ್ಕ ಸರ್ಕಲ್, ಮೊಗವೀರಪಟ್ಣ, ಸೀರೋಡ್, ಕೋಟೆಪುರ ಮಾರ್ಗವಾಗಿ ಉಳ್ಳಾಲ ಕೋಡಿ,ಉಳ್ಳಾಲ ಜಂಕ್ಷನ್‍ನಲ್ಲಿ ಸಮಾಪ್ತಿಯಾಯಿತು. ಪಥ ಸಂಚಲನದಲ್ಲಿ ಸುಮಾರು 250ಕ್ಕೂ ಹೆಚ್ಚು ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತು ಕೆಎಸ್‍ಆರ್‍ಪಿಯ ಮೂರು ತಂಡ ಮತ್ತು ಸ್ಥಳೀಯ ಪೆÇಲೀಸರು ಪಥ ಸಂಚಲನದಲ್ಲಿ ಭಾಗವಹಿಸಿದರು.

ಶಾಂತಿ ಕಾಪಾಡುವಂತೆ ಮನವಿ : ಉಳ್ಳಾಲದಲ್ಲಿ ಹೊರಗಿನಿಂದ ಬಂದ ಜನರು ಇಲ್ಲಿ ಗಲಭೆ ಸೃಷ್ಟಿಸಿ ಪರಾರಿಯಾಗುತ್ತಿದ್ದು, ಸ್ಥಳೀಯರಿಗೆ ಕೆಟ್ಟ ಹೆಸರು ತರಲಾಗುತ್ತಿದೆ. ಮೊಗವೀರಪಟ್ಣದಲ್ಲಿ ಬಸ್ಸಿಗೆ ಕಲ್ಲೆಸೆತ ನಡೆಸಿರುವುದು ಹೊರಗಿನವರಾಗಿದ್ದು, ಇದರಿಂದ ಮೊಗವೀರಪಟ್ಣದ ಜನರು ತೊಂದರೆಗೀಡಾಗುತ್ತಿದ್ದು, ಪೆÇಲೀಸರು ನಿರಪರಾಧಿಗಳಿಗೆ ತೊಂದರೆ ನೀಡದೆ ನೈಜ್ಯ ಅಪರಾಧಿಗಳನ್ನು ಹಿಡಿದು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಉಳ್ಳಾಲ್ ಆಗ್ರಹಿಸಿದ್ದಾರೆ. ಉಳ್ಳಾಲದ ಜನತೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

Exit mobile version