Site icon Ullalavani

ಸೋಮೇಶ್ವರ: ಯುವಕ ಆತ್ಮಹತ್ಯೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಸೋಮೇಶ್ವರ: ಸೋಮೇಶ್ವರ ಸಮುದ್ರಕ್ಕೆ ಹಾರಿ 20-25ರೊಳಗಿನ ಯುವಕನೋರ್ವ ಆತ್ಮಹತ್ಯೆಗೈದಿರುವ ಘಟನೆ ನಡೆದಿದ್ದು, ಮಧ್ಯಾಹ್ನ ವೇಳೆ ಮೃತದೇಹವನ್ನು ಸ್ಥಳೀಯ ಈಜುಗಾರರು ನೀರಿನಿಂದ ಹೊರತೆಗೆದಿದ್ದಾರೆ.

ಅಪರಿಚಿತನಾಗಿರುವ ಈತ ನೀಲಿ ಬಣ್ಣದ ಟೀಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟನ್ನು ಧರಿಸಿದ್ದು, ಸುಮಾರು 20-25ರೊಳಗಿನ ವಯಸ್ಸಿನವನಾಗಿದ್ದಾನೆಂದು ತಿಳಿದುಬಂದಿದೆ. ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿದ ಈತನನ್ನು ಸ್ಥಳೀಯ ಈಜುಗಾರರಾದ ಅಶೋಕ್ ಮತ್ತು ಮೋಹನ್ ಎಂಬವರು ರಕ್ಷಿಸಲು ಯತ್ನಿಸಿದರಾದರೂ ನೀರಿನ ರಭಸಕ್ಕೆ ಅದು ಸಾಧ್ಯವಾಗಲಿಲ್ಲ. ಬಳಿಕ ಒಂದು ಗಂಟೆಯ ಕಾಲ ಹುಡುಕಾಡಿದ ನಂತರ ಮೃತದೇಹ ಪತ್ತೆಯಾಗಿದೆ.

ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಉಳ್ಳಾಲದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದಿದ್ದಾರೆಂದು ತಿಳಿದುಬಂದಿದೆ.

Exit mobile version