Site icon Ullalavani

ಮುಕ್ಕಚ್ಚೇರಿ: ಬಸ್ ಗೆ ಕಲ್ಲು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಮಂಗಳೂರಿನಿಂದ ಸೋಮೇಶ್ವರ ಕಡೆಗೆ ಹೋಗುತ್ತಿದ್ದ ಬಸ್ ಗೆ ಮುಕ್ಕಚ್ಚೇರಿ ಸಮೀಪ ದುಷ್ಕರ್ಮಿಗಳು ಕಲ್ಲೆಸೆದು ಗಾಜು ಪುಡಿಗೈದಿರುವ ಘಟನೆ ಇಂದು ನಡೆದಿದೆ.

ಕರಾವಳಿ ಟ್ರಾವೆಲ್ಸ್ ಬಸ್ಸಿನ ಎಡಬದಿಯ ಗಾಜಿಗೆ ಕಲ್ಲೆಸೆದು ಹಾನಿಗೊಳಿಸಲಾಗಿದೆ. ಬಸ್ಸಿನಲ್ಲಿ ಪ್ರಯಾಣಿಕ ವಿಜಯ್ ಎಂಬವರು ಸ್ವಲ್ಪ ಗಾಯಗೊಂಡಿದ್ದಾರೆ.

ಶುಕ್ರವಾರ ತಡರಾತ್ರಿ ಇಕ್ಬಾಲ್ ಎಂಬವರ ಮೇಲೆ ನಾಲ್ವರು ದುಷ್ಕರ್ಮಿಗಳ ತಂಡ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳ್ಳಾಲದಲ್ಲಿ ಗಲಭೆ ನಡೆಸುವ ಹುನ್ನಾರದಿಂದ ಕಿಡಿಗೇಡಿಗಳು ಇಂತಹ ಕೃತ್ಯ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.

Exit mobile version