ಪ್ಯಾರೀಸ್: ಪ್ರಾನ್ಸ್ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಇವರ ದಾಳಿಗೆ ಸುಮಾರು 153ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಘಟನೆಯಲ್ಲಿ 153ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 200ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಐಎಸ್ ಉಗ್ರರು ಈ ದಾಳಿಯ ಹೊಣೆ ಹೊತ್ತಿದ್ದಾರೆ. ದಾಳಿ ನಡೆಸಿದ 15 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪ್ಯಾರೀಸ್ ಪೊಲೀಸರು ತಿಳಿಸಿದ್ದಾರೆ.
ಉಗ್ರರು ಅಟ್ಟಹಾಸಕ್ಕೆ ಅಮಾಯಕರು ಬಲಿಯಾಗಿರುವ ಬಗ್ಗೆ ಜಗತ್ತಿನೆಲ್ಲೆಡೆ ವ್ಯಾಪಕ ಖಂಡಣೆ ವ್ಯಕ್ತವಾಗಿದೆ.