ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು : ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರ ತೊಕ್ಕೊಟ್ಟು ಒಳಪೇಟೆ ಇದರ 27ನೇ ಸ್ಥಾನೀಯ ಸಮಿತಿಯ ಪದಾಧಿಕಾರಿಗಳ ಆಯ್ಕೆ ತೊಕ್ಕೊಟ್ಟು ಒಳಪೇಟೆ ಸುವರ್ಣ ಕಾಂಪ್ಲೆಕ್ಸ್‍ನಲ್ಲಿ ಇತ್ತೀಚೆಗೆ ನಡೆಯಿತು.
ಉಳ್ಳಾಲ ಗ್ರಾಮದ ಅಧ್ಯಕ್ಷ ಗಣೇಶ್ ಕಾಪಿಕಾಡ್, ಕ್ಷೇತ್ರ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಕ್ಷೇತ್ರ ಉಸ್ತುವಾರಿಗಳಾದ ರಾಘವ ಉಚ್ಚಿಲ್, ಮೋಹನ್ ರಾಜ್ ಕನೀರ್ ತೋಟ, ಕೌನ್ಸಿಲರ್ ಶಶಿಕಲಾ ಎ ಶೆಟ್ಟಿ, ಕುಮಾರಿ ಗೀತಾ ಬ್ಯಾ, ಯೋಗೀಶ್ ಹಾಗೂ ಗ್ರಾಮ ಕಾರ್ಯದರ್ಶಿ ಆನಂದ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.