Site icon Ullalavani

ಉಳ್ಳಾಲ: ವಿಚಾರ ಸಂಕೀರಣ ಕಾರ್ಯಕ್ರಮ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ರಾಜರು ,ಚಕ್ರವರ್ತಿಗಳ ಬಗ್ಗೆ ಕಪೋಲ ಕಲ್ಪಿತ ಚರಿತ್ರೆಗಳನ್ನು ಕಟ್ಟುವ ಕೆಲಸ ಬ್ರಿಟೀಷರ ವಸಾಹತುಷಾಹಿ ಯುಗದಿಂದಲೇ ನಡೆಯುತ್ತಾ ಬಂದಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ಬಿ ಶಿವರಾಂ ಶೆಟ್ಟಿ ಅವರು ಅಭಿಪ್ರಾಯಪಟ್ಟರು.

ಅವರು ಉಳ್ಳಾಲದ ಟಿಪ್ಪು ಸುಲ್ತಾನ್ ಪದವಿಪೂರ್ವಕಾಲೇಜಿನಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‍ಎಫ್‍ಐ)ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ನಡೆದ “ವಿಚಾರ ಸಂಕೀರಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ವಸಾಹತುಷಾಹಿ ಚರಿತ್ರೆಗಾರರು ಯಾವದೇ ಸಮಾಜಮುಖಿ ಕಥೆಗಳನ್ನು ವೈಭವೀಕರಿಸಿಲ್ಲ,ಬದಲಾಗಿ ಕೇವಲ ರಾಜರು ,ಸಾಮ್ರಾಟರ ಬಗ್ಗೆನೆ ಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.ಇಂದಿನ ಯುವ ವಿದ್ಯಾರ್ಥಿಗಳು ಚರಿತ್ರೆಗಾರರು ಬರೀ ರಾಜರು ಸಾಮ್ರಾಟರ ಬಗ್ಗೆನೆ ಯಾಕೆ ಉಲ್ಲೇಖಿಸಿದ್ದಾರೆ ಎಂಬುದರ ಬಗ್ಗೆ ಸೂಕ್ಷ್ಮ ಅಧ್ಯಯನ ನಡೆಸಬೇಕು .ವಿದ್ಯಾರ್ಥಿಗಳು ಯಾರೋ ನೀಡಿದ ವಿಚಾರಧಾರೆಗಳನ್ನು ಅನುಕರಿಸದೆ ಸ್ವತಂತ್ರವಾಗಿ ವಿಮರ್ಶಿಸಿ ತಮ್ಮತನವನ್ನು ಧರಡೀಕರಿಸಬೇಕು ಎಂದು ಕರೆ ನೀಡಿದರು.

ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಬ್ರಿಟೀಷರು ವಿರುಧ್ಧ ಹೋರಾಡಿ ದೇಶದ ಐಕ್ಯತೆಗೆ ಕಾರಣನಾದ ಟಿಪ್ಪುವಿನ ಹೆಸರನ್ನು ಇಂದು ಕೋಮುವಾದಿಗಳು ಮತೀಯ ವಿಭಜನೆಗೆ ಬಳಸುತ್ತಿರುವುದು ಖೇದಕರ .ಟಿಪ್ಪುವಿನ ಹಾಗೆಯೇ ಶಿವಾಜಿ ,ಸ್ವಾಮಿ ವಿವೇಕಾನಂದರೂ ದೇಶದ ಏಳಿಗೆಗಾಗಿ ಮತಭೇಧ ಮರೆತು ಹೋರಾಡಿದವರಾದರೂ ಕೆಲವರು ಅವರನ್ನೂ ಇಂದಿನ ದಿವಸಗಳಲ್ಲಿ ಕೋಮುವಾದದ ಸಂಕೇತವನ್ನಾಗಿಸಿದ್ದಾರೆ.ಅಪ್ರತಿಮ ದೇಶಭಕ್ತ ಟಿಪ್ಪುವಿನ ಜಯಂತಿಯನ್ನು ಘೋಷಿಸಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿಲುವು ಸ್ವಾಗತಾರ್ಹ ಎಂದು ಹೇಳಿದರು.

ಉಳ್ಳಾಲ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಹಾಜಿ ಯು,ಎಸ್ ಹಂಝ ,ಕೋಶಾಧಿಕಾರಿ ನಾಝಿಂ ರಹ್ಮಾನ್ , ಟಿಪ್ಪು ಸುಲ್ತಾನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಬಿ ಮೊಯಿದಿನ್ ಎಂ ಎ , ಎಸ್‍ಎಫ್‍ಐ ಮುಖಂಡರಾದ ಜೀವನ್‍ರಾಜ್ ಕುತ್ತಾರು ,ನಿತಿನ್ ಕುತ್ತಾರು , ಚರಣ್ ರಾಜ್ ಶೆಟ್ಟಿ ,ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸ್‍ಎಫ್‍ಐ ವಲಯಾಧ್ಯಕ್ಷ ಹಂಝ ಕಿನ್ಯ ಸ್ವಾಗತಿಸಿ ನಿರೂಪಿಸಿದರು .ಅಶ್ವಿದ್ ನಾಝಿಂ ಉಳ್ಳಾಲ ವಂದಿಸಿದರು.

Exit mobile version