Site icon Ullalavani

ಅಂಬಿಕಾರೋಡ್:ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕøತಿಕ ಕಾರ್ಯಕ್ರಮ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಅಂಬಿಕಾರೋಡ್: ಬಂಟರ ಸಂಘ ಕೋಟೆಕಾರು ಗ್ರಾಮ ಸಮಿತಿ ವತಿಯಿಂದ ಇಂದು ಸಂಜೆ 4.30 ಕ್ಕೆ ಕಾಪಿಕಾಡಿನ ಅಂಬಿಕಾರೋಡು ಗಟ್ಟಿ ಸಮಾಜಭವನದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ಉಳಿಪ್ಪಾಡಿಗುತ್ತು ಸುಬ್ಬಯ್ಯ ಮಾರ್ಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಂಟರ ಸಂಘ ಕೋಟೆಕಾರು ಗ್ರಾಮ ಸಮಿತಿ ಅಧ್ಯಕ್ಷ ರವಿರಾಜ್ ರೈ ಸಾಂತ್ಯಗುತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಬಂಟರ ಸಂಘ ಉಳ್ಳಾಲ ವಲಯ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಉದ್ಯಮಿ ಮತ್ತು ಬಿಜೆಪಿ. ಯುವಮೋರ್ಚಾ ಕೊಣಾಜೆ ಗ್ರಾಮ ಅಧ್ಯಕ್ಷ ಸುದರ್ಶನ್ ಶೆಟ್ಟಿ ನೆತ್ತಿಲಬಾಳಿಕೆ ದಡಸು, ರಾಜೇಶ್ ರೈ.ಕೋಟೆಕಾರ್ ಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಡಾ. ಮೋಹನ್ ದಾಸ್‍ರವರು ಸ್ಪರ್ಧಾತ್ಮಕ ಜಗತ್ತಿನ ತಯಾರಿಯಲ್ಲಿ ವಿದ್ಯಾರ್ಥಿಗಳ ಮತ್ತು ಪೋಷಕರ ಪಾತ್ರ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದು ಬಳಿಕ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಪ್ರತಿಕಾ ಪ್ರಕಟನೆ ತಿಳಿಸಿದೆ.

Exit mobile version