ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಜುಬಾ: ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ವಿಮಾನವೊಂದು ಪತನಗೊಂಡಿದ್ದು, 40 ಜನರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಸುಡಾನ್ ಜಬಾದಲ್ಲಿ ಬುಧವಾರ ನಡೆದಿದೆ.
ಕಾರ್ಗೊ ವಿಮಾನ ರನ್ ವೇ ಯಿಂದ ಹಾರಿದ ಬಳಿಕ 800 ಮೀಟರ್ ದೂರದಲ್ಲೇ ಪತನಗೊಂಡಿದೆ ಎಂದು ವರದಿಯಾಗಿದ್ದು, ವಿಮಾನ ಪತನಕ್ಕೆ ಕಾರಣ ಏನೆಂದು ಇನ್ನಷ್ಟೇ ತಿಳಿದುಬರಬೇಕಾಗಿದೆ.