Site icon Ullalavani

ಮಟ್ಕಾ ಅಡ್ಡೆಗೆ ದಾಳಿ: ಐವರು ಬಂಧನ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತಲಪಾಡಿ: ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಐದು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಮುಖ ಸೇರಿದಂತೆ ಮೂವರು ಪರಾರಿಯಾಗಿರುವ ಘಟನೆ ತಲಪಾಡಿ ಎಸ್ ಟಿಡಿ ಬೂತಿನ ಹಿಂದುಗಡೆ ನಡೆದಿದೆ.

ಉದಯ ದೇವಾಡಿಗ, ಭಾಸ್ಕರ, ಆನಂದ, ಶರೀಫ್, ಶೇಖರ ಎಂಬವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಪ್ರಮುಖ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು, ಚಂದ್ರಹಾಸ ತಲಪಾಡಿ, ರಾಝಿಕ್ ಮಂಜೇಶ್ವರ, ಅಶೋಕ್ ಕೋಟೆಕಾರು ಎಂಬವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಂದ ರೂ.10,000 ನಗದು ಹಾಗೂ ಆಟಕ್ಕೆ ಬಳಸಲಾದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಎಸಿಪಿ ಕಲ್ಯಾಣಿ ಶೆಟ್ಟಿ ಅವರ ನಿರ್ದೇಶನದಲ್ಲಿ ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ ಮತ್ತು ಎಸ್.ಐ ಭಾರತಿ ಅವರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

Exit mobile version