ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಐಕ್ಯವೇದಿಕೆಯ ವಿಶೇಷ ಸಂಘಟನಾ ರಚನಾ ಸಭೆಯು ನವೆಂಬರ್ 27ರಂದು ಶುಕ್ರವಾರ ಮಧ್ಯಾಹ್ನ ಉಳ್ಳಾಲದ ಮೇಲಂಗಡಿಯ ಶರಿಯತ್ ಕಾಲೇಜು ಕಚೇರಿಯಲ್ಲಿ ನಡೆಯಿತು.
ಸಂಘಟನೆಯ ಅಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ಬಲವರ್ಧನೆ, ಸಮುದಾಯದ ಐಕ್ಯತೆ ಹಾಗೂ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಗೌರವಾಧ್ಯಕ್ಷರಾಗಿ ಹಮೀದ್ ಬಾಯಬೆ, ಅಧ್ಯಕ್ಷರಾಗಿ ಹಾರೂನ್ ರಶೀದ್ ಅಗ್ನಾಡಿ, ಉಪಾಧ್ಯಕ್ಷರಾಗಿ ಮುಸ್ತಫಾ ಉಳ್ಳಾಲ್, ಸಿರಾಜ್ ಬಜ್ಪೆ ಹಾಗೂ ಹಾರೂನ್ ರಶೀದ್ ಬಂಟ್ವಾಳ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಶಹದತ್ ರಿಜ್ವಾನ್ ಪರ್ಕೋಡಿ, ಕಾರ್ಯದರ್ಶಿಗಳಾಗಿ ಜಾಕಿರ್ ಉಳ್ಳಾಲ್, ಸವಾಜ್ ಬಂಟ್ವಾಳ ಹಾಗೂ ಯಾಕೂಬ್ ಗುರ್ಪುರ, ಕೋಶಾಧಿಕಾರಿಯಾಗಿ ಫರ್ಝಾನ್ ಸಿದ್ದಕಟ್ಟೆ ಮತ್ತು ಲೆಕ್ಕ ಪರಿಶೋಧಕರಾಗಿ ಅಲ್ತಾಫ್ ಟಿಪ್ಪುನಗರ ಆಯ್ಕೆಯಾದರು.
ಸಂಘಟನಾ ಕಾರ್ಯದರ್ಶಿಗಳಾಗಿ ಸಮೀರ್ ತಲಪಾಡಿ, ಕಾದರ್ ಕಬ್ಬಕ, ದಾವೂದ್ ಇಮ್ರಾಜ್ ಬಜ್ಪೆ, ಯೂಸುಫ್ ಅಲೆದಂಗಡಿ, ಇಸ್ಮಾಯಿಲ್ ಉಳ್ಳಾಲ್ ಹಾಗೂ ವಹಬ್ ಕುದ್ರೋಳಿ ಅವರನ್ನು ನೇಮಕ ಮಾಡಲಾಯಿತು. ಗೌರವ ಸಲಹೆಗಾರರಾಗಿ ಜಾಫರ್ ಫೈಝಿ ಉಸ್ತಾದ್, ಮೊಹಮ್ಮದ್ ಕಾಜೂರು, ಕಾದರ್ ಮೂಲೂರು ಹಾಗೂ ಮೋಹಿದೀನ್ ಉಳ್ಳಾಲ್ ಆಯ್ಕೆಯಾದರು.
ದಕ್ಷಿಣ ಕನ್ನಡ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಅಸ್ರಫ್ ಕಲಂಬಿ, ಮಾಧ್ಯಮ ವಿಭಾಗದ ಮುಖ್ಯಸ್ಥರು ಹಾಗೂ ಮಾಧ್ಯಮ ಸಲಹೆಗಾರರಾಗಿ ಅಯಾತ್ ಮೀಡಿಯಾದ ಅಶ್ರಫ್, ಕಾನೂನು ಸಲಹೆಗಾರರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲ ಅಶ್ರಫ್ ಅಗ್ನಡಿ, ಹಿರಿಯ ಮಾರ್ಗದರ್ಶಕರ ಮಂಡಳಿಗೆ ಸಾಹುಲ್ ಹಮೀದ್ ಹಾಗೂ ಸಿ.ಹೆಚ್. ಇಸ್ಮಾಯಿಲ್ ಕೆ.ಸಿ. ರಸ್ತೆ ಮತ್ತು ಜಿಲ್ಲಾ ಸಂಚಾಲಕರಾಗಿ ಹನೀಫ್ ಖಾನ್ ಕೊಡಜೆ ಆಯ್ಕೆಯಾದರು.
ಕಾರ್ಯಕಾರಿಣಿ ಸದಸ್ಯರಾಗಿ ಝುಬೈರ್, ಎಂ. ಆಸೀಫ್ ಮಂಚಿ, ರಶೀದ್ ಮುರ, ಸಬೀಲ್ ಅಹ್ಮದ್ ಉಳ್ಳಾಲ್, ಅಕ್ಬರ್ ಅಲಿ ಪೊನ್ನೋಡಿ, ಸವಾದ್ ಅಬ್ದುಲ್ಲ, ಹನೀಫ್ ಉಳ್ಳಾಲ್, ನಿಸಾರ್ ಕರಾವಳಿ ಹಾಗೂ ನೌಶಾದ್ ಹಾಜಿ ಪುತ್ತೂರು ಅವರನ್ನು ಆಯ್ಕೆ ಮಾಡಲಾಯಿತು.
ಸಮುದಾಯದ ಐಕ್ಯತೆ ಮತ್ತು ಸಂಘಟನೆಯ ಬಲವರ್ಧನೆಯೊಂದಿಗೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಬಲೀಕರಣಕ್ಕೆ ಆದ್ಯತೆ ನೀಡುವ ಉದ್ದೇಶವನ್ನು ನೂತನ ಪದಾಧಿಕಾರಿಗಳು ವ್ಯಕ್ತಪಡಿಸಿದರು. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಮಾಜದ ಏಳಿಗೆಗಾಗಿ ಶ್ರಮಿಸುವ ಸಂಕಲ್ಪ ಕೈಗೊಂಡರು.
ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಐಕ್ಯವೇದಿಕೆಯು ಸಮುದಾಯದ ಧ್ವನಿಯಾಗಿ, ನ್ಯಾಯ ಹಾಗೂ ಸಾಮಾಜಿಕ ಸೌಹಾರ್ದತೆಯ ಪರವಾಗಿ ಕಾರ್ಯನಿರ್ವಹಿಸಲು ಸರ್ವರ ಸಹಕಾರ ಮತ್ತು ಒಗ್ಗಟ್ಟಿನ ಅಗತ್ಯವಿದೆ ಎಂದು ಸಭೆಯಲ್ಲಿ ಆಶಯ ವ್ಯಕ್ತಪಡಿಸಲಾಯಿತು.
ಸಭೆಯು ಧನ್ಯವಾದಗಳೊಂದಿಗೆ ಮುಕ್ತಾಯಗೊಂಡಿತು.
ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ
ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಐಕ್ಯವೇದಿಕೆ