Site icon Ullalavani

ಸಂತ ಅಲೋಶಿಯಸ್ ಉರ್ವಾದಲ್ಲಿ ಪ್ರೈಮರಿ ಶಾಲೆಯ ವಾರ್ಷಿಕ ಕ್ರೀಡಾಕೂಟ.

ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೈಮರಿ ಶಾಲೆಯ ಮೈದಾನದಲ್ಲಿ ಕಿರಿಯರ ವಿಭಾಗದ ವಾರ್ಷಿಕ ಕ್ರೀಡಾಕೂಟವನ್ನು ಅಂತರಾಷ್ಟ್ರೀಯ ವೈಟ್ ಲಿಫ್ಟರ್ ಯು ಲಕ್ಷ್ಮಣ್ ಉದ್ಘಾಟಿಸಿ ಶುಭ ಹಾರೈಸಿದರು.


ಶಾಲಾ ಸಂಚಾಲಕರಾದ ವಂ ಗುರುಗಳಾದ ಫಾದರ್ ಬೆಂಜಮಿನ್ ಪಿಂಟೋ ಅಧ್ಯಕ್ಷತೆಯನ್ನು ವಹಿಸಿ ಕ್ರೀಡೆಯಿಂದ ವಿದ್ಯಾರ್ಥಿಗಳಿಗೆ ಶಿಸ್ತು ನಾಯಕತ್ವ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತಾರೆ ಎಂದರು.


ಹಲವು ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು ಈ ಕ್ರೀಡಾಕೂಟದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಅಲೋಶಿಯಸ್ ಡಿಸೋಜ ,ರಕ್ಷಕ ಶಿಕ್ಷಣ ಸಂಘದ ಉಪಾಧ್ಯಕ್ಷರಾದ ಶೈಲಶ್ರೀ , ಹಿರಿಯ ಶಿಕ್ಷಕಿಯಾದ ಲವೀನ ಪಿಂಟೊ , ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಮೋದ್, ಸುಧಾಕರ್, ಹರಿಣಾಕ್ಷಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಪೂರ್ಣಿಮಾ ನಿರೂಪಿಸಿ, ತ್ರಿವೇಣಿ ಸ್ವಾಗತಿಸಿದರು, ಶಾಲಾ ನಾಯಕ ಹರ್ಷವರ್ಧನ್ ವಂದಿಸಿದರು.

Exit mobile version