ಉಳ್ಳಾಲ : ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಯಲ್ ಫೌಂಡೇಶನ್ (ರಿ.) ಉಳ್ಳಾಲ ವತಿಯಿಂದ ನಗರದ ಸೀ ಗೌಂಡ್ ಕಡಲತೀರದಲ್ಲಿ ತ್ರಿವಳಿ ಪರಿಸರ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
‘ಸೇವೆ, ಬೆಂಬಲ, ಸಮಾಜ ಕಲ್ಯಾಣ’ ಎಂಬ ಧೈಯವಾಕ್ಯದೊಂದಿಗೆ ‘ಸ್ವಚ್ಛ ಪರಿಸರ ಮತ್ತು ಹಸಿರು ಭವಿಷ್ಯ’ ಆಶಯದಡಿ ನಡೆದ ಅಭಿಯಾನದಲ್ಲಿ ಗಿಡ ನೆಡುವುದು, ಆರ್‌ಸಿಸಿ ಕುರ್ಚಿಗಳ ಅಳವಡಿಕೆ ಹಾಗೂ ಕಡಲತೀರ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಯಿತು.
ಸ್ಥಳೀಯ ಖತೀಬ್ ಅಬ್ದುಲ್ ಕಬೀರ್ ಸಅದಿ ದುವಾ ಹಾಗೂ ಆಶೀರ್ವಚನ ನೀಡಿದರು. ಮಾಜಿ ಕೌನ್ಸಿಲರ್ ಇಬ್ರಾಹಿಂ ಖಲೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಕೊಡುಗೆಯಾಗಿ ನೀಡಲಾದ ಆರ್‌ಸಿಸಿ ಉದ್ಯಾನವನ ಕುರ್ಚಿಗಳನ್ನು ಪಿ.ಸಿ.ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಹಾಶಿರ್ ಲೋಕಾರ್ಪಣೆಗೊಳಿಸಿದರು. ಆಲಿಯಾ ಕಾಲೇಜ್ ಆಫ್ ನರ್ಸಿಂಗ್‌ನ ಉಪನ್ಯಾಸಕಿ ಸೋನಾ ಬಿಜು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಭಿಯಾನದ ಅಂಗವಾಗಿ ಹಿರಿಯರ ಸ್ಮರಣಾರ್ಥ ಸಸಿಗಳನ್ನು ನೆಟ್ಟು ಅವುಗಳನ್ನು ನಿರಂತರವಾಗಿ ಪೋಷಿಸುವ ಸಂಕಲ್ಪ ಮಾಡಲಾಯಿತು.
ಇದೇ ವೇಳೆ ಆಲಿಯಾ ನರ್ಸಿಂಗ್ ಕಾಲೇಜಿನ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಸಮಾಜ ಸೇವಕ ಇಬ್ರಾಹಿಂ ಸ್ವಿಸ್ ಡೈಮಂಡ್, ಉಳ್ಳಾಲ ನಗರಸಭೆಯ ಪೌರಕಾರ್ಮಿಕ ವಿಭಾಗದ ಮೇಲ್ವಿಚಾರಕ ಕೆಂಚಪ್ಪ ಡೈಮಂಡ್ ಇಬ್ರಾಹಿಂ ಖಲೀಲ್, ಮುಕ್ಕಚ್ಚೇರಿ ಹೈದರ್ ಅಲಿ ರೋಡ್ ಅಲಿ ಜುಮಾ ಮಸೀದಿ ಅಧ್ಯಕ್ಷ ಮುಹಿದ್ದೀನ್, ಕೈಕೋ ರಿಫಾಯಿಯಾ ಜುಮಾ ಮಸೀದಿಯ ಖತೀಬ್ ಶಾಫಿ ಉಸ್ತಾದ್, ಮದರಸ ಅಧ್ಯಾಪಕ ಪಾತೂರು ಉಸ್ತಾದ್, ಮಲಿಕ್, ಹಾರಿಸ್ ಫೂಟ್, ಇಲ್ಯಾಸ್, ಅಬ್ದುಲ್ ರವೂಫ್, ಎಂ.ಎಚ್. ಕನ್‌ಸ್ಟ್ರಕ್ಷನ್‌ನ ಹನೀಫ್ ಹಾಗೂ ಡೈಮಂಡ್ ಸ್ಪೋರ್ಟ್ಸ್ ಮತ್ತು ಕಲ್ಬರಲ್
ಅಸೋಸಿಯೇಷನ್ ಸ್ಥಾಪಕ ಲತೀಫ್ ಉಪಸ್ಥಿತರಿದ್ದರು.
ಅಭಿಯಾನಕ್ಕೆ ಸಾಂಸ್ಥಿಕ ಬೆಂಬಲ ನೀಡಿದವರು ಹಾಗೂ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪ್ರಮಾಣಪತ್ರ ವಿತರಿಸಲಾಯಿತು.
ಫೌಂಡೇಶನ್ ಅಧ್ಯಕ್ಷ ತೌಸೀಫ್ ಅಲಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಳ್ಳಾಲ ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟದ ಸಂಚಾಲಕ ಮಂಗಳೂರ ರಿಯಾಝ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ನವಾಝ್ ವಂದಿಸಿದರು.
ಉಪಾಧ್ಯಕ್ಷ ಮನ್ಸೂರ್, ಕೋಶಾಧಿಕಾರಿ ಜುನೈದ್, ಸದಸ್ಯರಾದ ಜಲಾಲುದ್ದೀನ್, ಮುಸ್ತಫಾ, ಬಾಸಿತ್, ತ್ವಾಯಿಫ್, ಸಫಾನ್, ಶಬು, ನೌಫಲ್, ರಾಶಿಕ್, ಇಟ್ಬಾಲ್, ನೌರೀಶ್ ಮತ್ತು ಖಲೀಲ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಅನಿವಾಸಿ ಭಾರತೀಯ ಸದಸ್ಯರಾದ ಸುಹೈಲ್, ಸಿರಾಜ್, ಸುಹೈಲ್ ಕುವೈತ್ ಹಾಗೂ ಅಝೀಮ್ ಅಶ್ರಫ್ ಅವರ ಕೊಡುಗೆಯನ್ನು ಈ ವೇಳೆ ಸ್ಮರಿಸಲಾಯಿತು.