Site icon Ullalavani

ಆಂಗ್ಲ ಭಾಷೆಯಲ್ಲಿ ಶಿಕ್ಷಣ ಪಡೆದವರು ತಮ್ಮ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ: ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು ಒಳ್ಳೆಯ ಡಾಕ್ಟರ್ ಆಗಲು ಸಾಧ್ಯವಿಲ್ಲ. ಅವರು ಒಳ್ಳೆಯ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಲು ಮಾತ್ರ ಸತ್ಯ. ಕನ್ನಡದಲ್ಲಿ ಯಾರು ಕಲಿಯುತ್ತಾರೆಯೋ ಅವರು ತಮ್ಮ ತಂದೆ ತಾಯಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆಂಗ್ಲ ಭಾಷೆಯಲ್ಲಿ ಶಿಕ್ಷಣ ಪಡೆದವರು ತಮ್ಮ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಎಂದು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕ ೃತ ಸಾಹಿತಿ ಡಾ. ಕುಂ. ವೀರಭದ್ರಪ್ಪ ಖೇದ ವ್ಯಕ್ತಪಡಿಸಿದರು.

ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಹಾಗೂ ಸಾಂಸ್ಕ ೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ವೆಯೊಂದರ ಪ್ರಕಾರ ಪ್ರಾದೇಶಿಕ ಭಾಷೆಗಳಲ್ಲಿ ಕಲಿತವರು, ಗ್ರಾಮೀಣ ಭಾಷೆಯಲ್ಲಿ ಬೆಳೆದವರು, ಕಲೆ ಮೊದಲಾದ ವಿಷಯದಲ್ಲಿ ಶಿಕ್ಷಣ ಪಡೆದವರು ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಹೇಳಿದೆ. ಆದರೆ ಆಂಗ್ಲ ಭಾಷೆಯಲ್ಲಿ ಶಿಕ್ಷಣ ಪಡೆದ ಮಕ್ಕಳ ಪೋಷಕರು ತಮ್ಮ ಸಾವಿನ ನಂತರ ದೇಹವನ್ನು ದಾನ ಮಾಡಲು ಮುಂದಾಗುತ್ತಾರೆ. ಅದಕ್ಕೆ ಬೇಕಾದ ದಾಖಲೆ ಸಿದ್ಧಪಡಿಸಿರುತ್ತಾರೆ. ಕಾರಣವಿಷ್ಟೆ ಸತ್ತಾಗ ಮಕ್ಕಳು ಬರಲಾರರು ಎಂಬ ಆತಂಕವಿದೆ ಎಂದರು.

ಹಿಂದೆ ಕನ್ನಡ ಪಾಠ ಬೋ„ಸುವ ಗುರುಗಳು ವಿದ್ಯಾರ್ಥಿಗಳಿಗೆ ಕನ್ನಡ ಕಾವ್ಯವನ್ನು ಅರೆದು ಕುಡಿಸುತ್ತಿದ್ದರು. ಕೆಲವು ಶಿಕ್ಷಕರು ಒಂದು ಪಠ್ಯವನ್ನು ಹತ್ತು ದಿನಗಳ ಕಾಲ ಬೋಧಿಸುತ್ತಿದ್ದರು. ಅಷ್ಟೊಂದು ಆಸಕ್ತಿ ಆ ಪಠ್ಯದ ಮೇಲಿತ್ತು. ಹಾಗಾಗಿ ಕನ್ನಡ ಪ್ರೇಮ ಹೆಚ್ಚಿದೆ. ಈಗ ಮಕ್ಕಳಲ್ಲಿ ಮುಂದೆ ಏನಾಗಬೇಕು ಎಂದು ಕೇಳಿದರೆ ಡಾಕ್ಟರ್ ಎಂಜಿನಿಯರ್ ಆಗಬೇಕು ಎಂಬ ಕನಸು ಕಾಣುತ್ತಿದ್ದಾರೆ ಹೊರತು ನಾನು ಉತ್ತಮ ಶಿಕ್ಷಕನಾಗಬೇಕು ಎಂಬ ಆಸಕ್ತಿ ಹೊಂದುವ ಉದಾಹರಣೆ ಕಾಣಿಸುತ್ತಿಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ. ಟಿ.ಡಿ. ಕೆಂಪರಾಜು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

Exit mobile version