ಚಿರಾಯು ಆಯುರ್ವೇದ ಪಂಚಕರ್ಮ ಸ್ಪೆಷಾಲಿಟಿ ಕ್ಲಿನಿಕ್ ವತಿಯಿಂದ ನವೆಂಬರ್ 22ರಂದು ಆಯೋಜಿಸಲಾಗಿದ್ದ ಉಚಿತ ವೈದ್ಯಕೀಯ ಶಿಬಿರ ಯಶಸ್ವಿಯಾಗಿ ನಡೆಯಿತು.
ಶಿಬಿರದಲ್ಲಿ ಬೆಳಿಗ್ಗೆ 6ರಿಂದ 9:30ರವರೆಗೆ ರಕ್ತದ ಮಾದರಿ ಸಂಗ್ರಹಣೆ ನಡೆಸಲಾಗಿದ್ದು, ಒಟ್ಟು 62 ಮಂದಿ ರಕ್ತದ ಮಾದರಿ ನೀಡಿದರು. ಸಂಜೆ 4ರಿಂದ 7:30ರವರೆಗೆ ನಡೆದ ವೈದ್ಯಕೀಯ ಶಿಬಿರದಲ್ಲಿ 29 ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಶಿಬಿರದಲ್ಲಿ ಉಪವಾಸ ರಕ್ತದ ಸಕ್ಕರೆ ಪರೀಕ್ಷೆ (FBS), ಹಿಮೋಗ್ಲೋಬಿನ್ ಪರೀಕ್ಷೆ (Hb) ಹಾಗೂ ರಕ್ತದೊತ್ತಡ ತಪಾಸಣೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು. ಅಲ್ಲದೆ, ಭಾಗವಹಿಸಿದವರಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನವೆಂಬರ್ 28ರಂದು ಸ್ವರ್ಣಪ್ರಾಶನ ಕಾರ್ಯಕ್ರಮವನ್ನೂ ಆಯೋಜಿಸಲಾಗಿದ್ದು, 6 ತಿಂಗಳಿಂದ 16 ವರ್ಷದೊಳಗಿನ ಮಕ್ಕಳಿಗೆ ಉಚಿತ ವೈದ್ಯರ ಸಮಾಲೋಚನೆ ಹಾಗೂ ಆರೋಗ್ಯ ತಪಾಸಣೆಯ ಸೌಲಭ್ಯ ಕಲ್ಪಿಸಲಾಗಿತ್ತು. ಸ್ವರ್ಣಪ್ರಾಶನ ಹನಿಗಳನ್ನು ₹100 ದರದಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿತ್ತು.
