ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ : ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸುಧಾನ ಪ್ರೌಢಶಾಲೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 17ರ ವಯೋಮಿತಿಯ ಬಾಲಕಿಯರ 48-52ಕೆಜಿ ವಿಭಾಗದಲ್ಲಿ ಉಳ್ಳಾಲದ ಭಾರತಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ದಿಯಾ ಡಿ.ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಉಳ್ಳಾಲದ ದಿನಕರ್ ಡಿ ಹಾಗೂ ಧನಲಕ್ಷ್ಮೀಯವರ ಸುಪುತ್ರಿ.