ತಲಪಾಡಿ: ಹೆಜ್ಜೆ ಗುರುತು – ಶತಮಾನದ ಪಯಣದೊಂದಿಗೆ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಎಸ್ಎಫ್) ತಲಪಾಡಿ ಯೂನಿಟ್ ವತಿಯಿಂದ ಸದಸ್ಯತ್ವ ಸಂಭ್ರಮ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಬಹು ಸಿನಾನ್ ಸಖಾಫಿ ಅವರಿಗೆ ಸದಸ್ಯತ್ವ ನೀಡುವ ಮೂಲಕ ಸದಸ್ಯತ್ವ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ಎಸ್ಎಫ್ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಎಂ.ಎಸ್.ಎಂ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಕುವೈತ್ ಕೆಸಿಎಫ್ ಸಂಘಟನಾ ಕಾರ್ಯದರ್ಶಿ ಶಮೀಮ್ ತಲಪಾಡಿ ಬಿಲಾಲ್, ಜುಮಾ ಮಸೀದಿ ತಲಪಾಡಿಯ ಅಧ್ಯಕ್ಷರಾದ ಯಾಕೂಬ್ ಪೂಮನ್, ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಪೂಮನ್, ಉಮರ್ ನಾಯಕ ಇಬ್ರಾಹಿಂ ತಲಪಾಡಿ, ಎಸ್ವೈಎಸ್ ತಲಪಾಡಿ ಬ್ರಾಂಚ್ ಅಧ್ಯಕ್ಷರಾದ ಸಯ್ಯದ್ ಶರೀಫ್ ತಂಙಳ್ ಮಕ್ಯಾರ್, ಎಸ್ವೈಎಸ್ ಬ್ರಾಂಚ್ ಕೋಶಾಧಿಕಾರಿ ಯೂಸುಫ್ ತಲಪಾಡಿ, ಎಸ್ಎಸ್ಎಫ್ ರಾಜ್ಯ ಮೀಡಿಯಾ ಕಾರ್ಯದರ್ಶಿ ಹಮೀದ್ ತಲಪಾಡಿ, ಸೆಕ್ಟರ್ ನಾಯಕರಾದ ಅಸ್ಗರ್ ಹಾಗೂ ನೌಷಾದ್ ತಲಪಾಡಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಯೂನಿಟ್ನ ವಿವಿಧ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮದ ಕುರಿತು ಯೂನಿಟ್ ಕೋಶಾಧಿಕಾರಿ ಮಜೀದ್ ತಲಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.