Site icon Ullalavani

ಭಾರತ ಇಂದು ಏಕತೆಯ ದಾರಿಯಲ್ಲಿ ನಡೆಯುತ್ತಿಲ್ಲ:ವಾಸುದೇವ ಉಚ್ಚಿಲ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕುತ್ತಾರು : ಭಾರತ ಇಂದು ಏಕತೆಯ ದಾರಿಯಲ್ಲಿ ನಡೆಯುತ್ತಿಲ್ಲ. ಮತೀಯ ಗಲಭೆಗಳು, ಅಸ್ಪøಶ್ಯತೆ ಇನ್ನು ಇರುವುದು ನಿಜವಾಗಲೂ ದುರಂತ. ಸ್ವತಂತ್ರ ಹೋರಾಟಗಾರರ ಕನಸು ನನಸಾಗಬೇಕಾದರೆ ಅವರ ವಿಚಾರಗಳನ್ನು ತಿಳಿದು ಮೈಗೂಡಿಸಿಕೊಳ್ಳಬೇಕು ಎಂದು ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಾಸುದೇವ ಉಚ್ಚಿಲ್ ಹೇಳಿದರು.

ಅವರು ಜೈ ಹನುಮಾನ್ ಕ್ರೀಡಾಮಂಡಳಿ ಬಟ್ಟೆದಡಿ ಕುತ್ತಾರು ಹಾಗೂ ನೆಹರೂ ಯುವ ಕೇಂದ್ರ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಉದ್ಘಾಟಿಸಿದರು.

ವಲ್ಲಭಬಾಯಿ ಪಟೇಲರು ಕಂಡ ಏಕೀಕರಣದ ಕನಸ್ಸು ಮೆಚ್ಚುವಂತದ್ದು, ಅದು ಕಾರ್ಯರೂಪಕ್ಕೆ ಬಂದಲ್ಲಿ ಭಾರತದ ಅಭಿವೃದ್ಧಿಯನ್ನು ಊಹಿಸಲು ಸಾಧ್ಯವಾಗುತ್ತಿರಲಿಲ್ಲ. ಅದೇ ಕಾರಣಕ್ಕಾಗಿ ಹೈದರಾಬಾದ್, ಕಾಶ್ಮೀರ, ಜುನಾಗಡಕ್ಕೆ ಸೈನ್ಯ ಮೂಲಕ ಯುದ್ಧ ಸಾರಿ ಭಾರತಕ್ಕೆ ಸೇರಿಸಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಚೂರು ಕಾಲೇಜಿನ ಉಪನ್ಯಾಸಕ ಜೀವನ್ ರಾಜ್ ಕುತ್ತಾರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನೆಹರೂ ಯುವ ಕೇಂದ್ರದ ತಾಲೂಕು ಕೋ-ಆರ್ಡಿನೇಟರ್ ಆದ ರಘುವೀರ್ ಸೂಟರ್‍ಪೇಟೆ, , ಮುನ್ನೂರು ಪಂ ಸದಸ್ಯ ಶಶಿಕಲಾ ಗಿರಿಯಮೂಲೆ, ಕರಾವಳಿ ಕಾಲೇಜಿನ ಉಪನ್ಯಾಸಕ ಪೃಥ್ವಿರಾಜ್ ಕಬೆಕೋಡಿ, ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿಯ ಗೌರವಾಧ್ಯಕ್ಷ ಶ್ರೀಧರ್ ಸಾಲ್ಯಾನ್ ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯದರ್ಶಿ ಮಿಥುನ್‍ರಾಜ್ ಕಂಪ ಸ್ವಾಗತಿಸಿದರು. ಅಧ್ಯಕ್ಷ ಚಂದ್ರಹಾಸ ಡಿ. ವಂದಿಸಿದರು.

Exit mobile version