Site icon Ullalavani

ಅಸೈ ಮದಕ: ಮಕ್ಕಳ ಚಿಗುರು 2026 ಸಂಭ್ರಮದಿಂದ ಆಚರಣೆ

ಅಸೈ ಮದಕ: ಸರಕಾರಿ ಮುಸ್ಲಿಂ ವಸತಿ ಶಾಲೆ ಹಾಗೂ ತುಂಬೆಜ ಪಬ್ಲಿಸಿಟಿ ಇದರ ಸಹಯೋಗದಲ್ಲಿ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ‘ಮಕ್ಕಳ ಚಿಗುರು 2026’ ಎಂಬ ಹೆಸರಿನಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಶಾಲೆಯ ಪ್ರಾಂಶುಪಾಲರಾದ ಉಮರಬ್ಬ ಅವರು ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ತುಂಬೆಜ ಪಬ್ಲಿಸಿಟಿಯ ಸಂಸ್ಥಾಪಕ ಶಕೀಲ್ ತುಂಬೆ ಅವರು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಇದೇ ಸಂದರ್ಭದಲ್ಲಿ 2026ರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರಾದ ಉಮರಬ್ಬ ಅವರು ವೈಯಕ್ತಿಕ ನೆಲೆಯಲ್ಲಿ ತಲಾ 5,000 ರೂ.ಗಳಂತೆ ಚೆಕ್ ಮೂಲಕ ನಗದು ಬಹುಮಾನ ನೀಡಿ ಪ್ರತಿಭಾ ಪುರಸ್ಕಾರ ನೆರವೇರಿಸಿದರು.

ದೈಹಿಕ ಶಿಕ್ಷಕ ಇಬ್ರಾಹಿಂ ಕಂಡಿಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಗಣಿತ ಶಿಕ್ಷಕ ಮೆಹಬೂಬ್ ಸಬ್ ಮಕ್ಕಳ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಹಳೆ ವಿದ್ಯಾರ್ಥಿ ಶಕೀಲ್ ತುಂಬೆ ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಉಮರಬ್ಬ ಅವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಶಿಕ್ಷಕರಾದ ರಾಮಚಂದ್ರ, ವಿನುತಾ ಹಾಗೂ ದಯಾನಂದ ಉಪಸ್ಥಿತರಿದ್ದರು. ಹಸೀನಾ ವಂದಿಸಿದರು. ಕುಮಾರಿ ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿದರು.

ಅಸೈ ಮದಕ: ನವೆಂಬರ್ 14 ರಂದು ಸರಕಾರಿ ಮುಸ್ಲಿಂ ವಸತಿ ಶಾಲೆ ಮತ್ತು ತುಂಬೆಜ ಪಬ್ಲಿಸಿಟಿ ಇದರ ಸಹಯೋಗದಲ್ಲಿ ಮಕ್ಕಳ ಚಿಗುರು 2026-ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

Exit mobile version