Site icon Ullalavani

ಪ್ರವಾಸಿ ಜೀವನಕ್ಕೆ ವಿದಾಯ; ತಾಯ್ನಾಡಿಗೆ ಮರಳುತ್ತಿರುವ ಹನೀಫ್ ಬದಿಮಾಲೆಗೆ ನುಸ್ರತುಲ್ ಅನಾಮ್ ಕಮಿಟಿಯಿಂದ ಆತ್ಮೀಯ ಬೀಳ್ಕೊಡುಗೆ

ನುಸ್ರತುಲ್ ಅನಾಮ್ ಕಮಿಟಿಯ ಸಕ್ರಿಯ ಕಾರ್ಯಕರ್ತರಾದ ಹನೀಫ್ ಬದಿಮಾಲೆ ಅವರು ತಮ್ಮ ಸುದೀರ್ಘ ಪ್ರವಾಸಿ ಜೀವನಕ್ಕೆ ವಿದಾಯ ಹೇಳಿ ತಾಯ್ನಾಡಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಕಮಿಟಿಯ ವತಿಯಿಂದ ಅವರಿಗೆ ಹೃದಯಪೂರ್ವಕ ಶುಭಹಾರೈಕೆಗಳನ್ನು ಸಲ್ಲಿಸಲಾಗಿದೆ.

ಕಮಿಟಿಯ ಪ್ರತಿಯೊಂದು ಕಾರ್ಯಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ, ಸಂಘಟನೆಯ ಉದ್ದೇಶಗಳಿಗೆ ಬೆಂಬಲವಾಗಿ ನಿಂತು ತಮ್ಮದೇ ಆದ ರೀತಿಯಲ್ಲಿ ಅಮೂಲ್ಯ ಸೇವೆ ಮತ್ತು ಸಹಕಾರವನ್ನು ನೀಡಿರುವ ಹನೀಫ್ ಬದಿಮಾಲೆ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದು ಕಮಿಟಿ ತಿಳಿಸಿದೆ.

ಪ್ರವಾಸಿ ಜೀವನವೆಂಬುದು ಕೇವಲ ದುಡಿಮೆಗೆ ಸೀಮಿತವಾಗಿರದೆ, ಕುಟುಂಬ ಹಾಗೂ ತಾಯ್ನಾಡಿನಿಂದ ದೂರವಿದ್ದು ಅನೇಕ ತ್ಯಾಗಗಳನ್ನು ಮಾಡಿ ಬದುಕು ಕಟ್ಟಿಕೊಳ್ಳುವ ಸವಾಲಿನ ಪಯಣವಾಗಿದೆ. ಇಂತಹ ಸುದೀರ್ಘ ಪಯಣಕ್ಕೆ ವಿರಾಮ ನೀಡಿ ಸ್ವದೇಶಕ್ಕೆ ಮರಳುತ್ತಿರುವುದು ಸಂತಸದ ಸಂಗತಿಯಾಗಿದೆ.

ಹನೀಫ್ ಬದಿಮಾಲೆ ಅವರು ಪ್ರವಾಸಿ ಜೀವನದಿಂದ ದೂರವಾಗುತ್ತಿದ್ದರೂ ಕಮಿಟಿಯೊಂದಿಗಿನ ಅವರ ಆತ್ಮೀಯ ಒಡನಾಟ ಹಾಗೂ ಸೇವೆಯ ನೆನಪುಗಳು ಸದಾ ನಮ್ಮೊಂದಿಗಿರಲಿವೆ. ಅವರ ಸೇವೆ ಮತ್ತು ಸಹಕಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನುಸ್ರತುಲ್ ಅನಾಮ್ ಕಮಿಟಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರ ಮುಂದಿನ ಜೀವನ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯಿಂದ ಕೂಡಿರಲಿ. ಅಲ್ಲಾಹನು ಅವರ ದುಡಿಮೆಗೆ ಬರಕತ್ ನೀಡಿ, ಕುಟುಂಬದೊಂದಿಗೆ ಸಂತೋಷದ ಜೀವನ ನಡೆಸುವ ಭಾಗ್ಯ ಕರುಣಿಸಲಿ ಎಂದು ಕಮಿಟಿಯ ವತಿಯಿಂದ ಹಾರೈಸಲಾಗಿದೆ.

Exit mobile version