Site icon Ullalavani

ಕೋಟಿಪದವು ಶ್ರೀ ರಾಮ ಮಂದಿರದಲ್ಲಿ ಗೋಪೂಜೆ , ಎರಡು ಕುಟುಂಬಗಳಿಗೆ ಗೋದಾನ

ಕೊಣಾಜೆ : ಗ್ರಾಮ ವಿಕಾಸ ಸಮಿತಿ ಕೊಣಾಜೆ , ಮೈಥಿಲಿ ಮಾತೃ ಮಂಡಳಿ ಕೋಟಿಪದವು ಮತ್ತು ಕೊಣಾಜೆ, ಫಜೀರು, ಪಾವೂರು – ಹರೇಕಳ ಮಾತೃ ಮಂಡಳಿಗಳ ಸಹಯೋಗದಲ್ಲಿ ಕೋಟಿಪದವು ಶ್ರೀ ರಾಮ ಮಂದಿರದಲ್ಲಿ ದೀಪಾವಳಿ ಪ್ರಯುಕ್ತ ಗೋಪೂಜೆ ಮತ್ತು ಎರಡು ಕುಟುಂಬಗಳಿಗೆ ಗೋದಾನ ಕಾರ್ಯಕ್ರಮ ಇನೋಳಿಯ ಗಾವೋ ಸುರಭಿ ಗೋಮಂದಿರದ ಮಾರ್ಗದರ್ಶನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಶಿಕ್ಷಣ ಮತ್ತು ಸಂಸ್ಕಾರ ಟೋಳಿ ಸದಸ್ಯ ರವಿಚಂದ್ರನ್, ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಗಜಾನನ ಪೈ ಮಂಗಳೂರು, ಗ್ರಾಮ ವಿಕಾಸ ಸಮಿತಿ ಸಂಯೋಜಕ ಜಗನ್ನಾಥ ಶೆಟ್ಟಿ, ಸಹ ಸಂಯೋಜಕ ಸುರೇಶ್ ಗಟ್ಟಿ ಮೈಥಿಲಿ ಮಾತೃ ಮಂಡಳಿಯ ಅಧ್ಯಕ್ಷೆ ಭಾರತಿ ಎಸ್. ರೈ, ಬಂಟರ ಸಂಘ ಉಳ್ಳಾಲ ವಲಯ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರು, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಅಚ್ಯುತಗಟ್ಟಿ ಕೆಳಗಿನ ಮನೆ, ಶ್ರೀರಾಮ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ಸುರೇಂದ್ರ ರೈ ಗ್ರಾಮಚಾವಡಿ, ಮಂದಿರದ ಅಧ್ಯಕ್ಷ ಸೀತಾರಾಮ ಸಣ್ಣಪದವು, ಮಾಜಿ ಅಧ್ಯಕ್ಷರಾದ ಸುಂದರ ಕೋಟ್ಯಾನ್ ತಾಕಟೆ, ವಿಶ್ವನಾಥ ಗಟ್ಟಿ ಕೋಟಿಪದವು, ಅರ್ಚಕ ಹೊನ್ನಪ್ಪ ಕುಲಾಲ್, ನಾರಾಯಣ ಬೀಜಗುರಿ, ಚಂದ್ರಹಾಸ ನಾರ್ಣ ಶೆಟ್ಟಿಪಾಲು, ಗೌರವಾಧ್ಯಕ್ಷ ನರ್ಸುಗೌಡ ಅಣ್ಣೆರೆಪಾಲು, ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಡೆಂಜ ಸೋಮಶೇಖರ್ ಚೌಟ, ದಕ್ಷ ಯುವ ಬಳಗದ ಅಧ್ಯಕ್ಷ ಸುರೇಶ್ ಆಚಾರ್ಯ, ಸಪ್ತಸ್ವರ ಕಲಾತಂಡದ ರಾಮಚಂದ್ರ ಎಂ., ವರದರಾಜ ಕೊಣಾಜೆ, ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಗೋಪಾಲ್ ಅಣ್ಣೆರೆ ಪಾಲು, ನಿವೃತ್ತ ಯೋಧ ಉಮಾನಾಥ ರೈ, ಕೋರ್ದಬ್ಬು ಸಾನ ಮಣಿಬೆಟ್ಟು ಇದರ ಮಾತೃ ಮಂಡಳಿ ಅಧ್ಯಕ್ಷೆ ಅಶ್ವಿನಿ, ಸೋಮನಾಥೇಶ್ವರ ದುರ್ಗಾ ಪರಮೇಶ್ವರೀ ಮಾತೃ ಮಂಡಳಿ ಇನೋಳಿ ಇದರ ಅಧ್ಯಕ್ಷೆ ಲೀಲಾವತಿ, ಕಾರ್ಯಕ್ರಮ ಸಂಯೋಜಕಿ ಸುಮಲತಾ ಕೋಣಾಜೆ, ಡಾ| ನವೀನ್ ಎನ್. ಕೊಣಾಜೆ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಪ್ರೇಮ್ ಪಾವೂರು ಮತ್ತು ರಾಜೇಶ್ ಬೊಸ್ತುಕೋಡಿ ಕುಟುಂಬಕ್ಕೆ ಎರಡು ಜೋಡಿ ಮಲೆನಾಡು ಗಿಡ್ಡ ದನಗಳನ್ನು ಗಾವೋ ಸುರಭಿ ಗೋಮಂದಿರದ ಮುಖ್ಯಸ್ಥ ಹಾಗೂ ಗೋ ಸೇವಾ ಗತಿವಿಧಿ ಜಿಲ್ಲಾ ಪ್ರಶಿಕ್ಷಣಾ ಪ್ರಮುಖ್ ಅಕ್ಷಯ್ ಧೇನು ಹಳ್ಳಿ ಗೋದಾನ ನೆರವೇರಿಸಿ ಮುಂದಿನ ದಿನಗಳಲ್ಲಿ ಈ ತಳಿಯ ದನಗಳ ಸಂವರ್ಧನೆಗೆ ಎಲ್ಲರೂ ಮುಂದಾಗಬೇಕು ಎಂದರು. ಕಾರ್ಯಕ್ರಮದ ಅಂಗವಾಗಿ ಗೂಡುದೀಪ ಸ್ಪರ್ಧೆ ಮತ್ತು ಹಣತೆ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು.

ಮೈಥಿಲಿ ಮಾತೃ ಮಂಡಳಿ ಪ್ರ. ಕಾರ್ಯದರ್ಶಿ ಸರಿತಾ ಗ್ರಾಮಚಾವಡಿ, ರಾಷ್ಟ್ರೋತ್ತಾನ ವಿದ್ಯಾಕೇಂದ್ರದ ದೈಹಿಕ ಶಿಕ್ಷಕಿ ಮಾಲಶ್ರೀ ಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version