Site icon Ullalavani

ಕೊರಗತನಿಯ ಮತ್ತು ಗುಳಿಗ ದೈವಗಳ ನೂತನ ಭಂಡಾರಗುಡಿ ನಿರ್ಮಾಣದ ವಿಜ್ಞಾಪನಾ ಪತ್ರ ಬಿಡುಗಡೆ

ತೊಕ್ಕೊಟು: ಶ್ರೀ ಕೊರಗತನಿಯ ಸೇವಾ ಸಮಿತಿ (ರಿ.), ಕೆರೆಬೈಲ್ ಗುಡ್ಡೆ, ಚೆಂಬುಗುಡ್ಡೆ, ತೊಕ್ಕೊಟು ಇದರ ವತಿಯಿಂದ ಶ್ರೀ ಕೊರಗತನಿಯ ಮತ್ತು ಶ್ರೀ ಗುಳಿಗ ದೈವಗಳ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಭಂಡಾರಗುಡಿಯ ವಿಜ್ಞಾಪನಾ ಪತ್ರವನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸೂರಜ್ ಕೋಟೆಕಾರ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಪುಷ್ಪಾ ಸೂರಜ್ ಬಿಡುಗಡೆಗೊಳಿಸಿದರು.

ಸಭಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ನೆರವೇರಿಸಿದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಚಂದ್ರಶೇಖರ ಉಚ್ಚಿಲ್ ಅವರು ಮಾತನಾಡಿ, “ಕೊರಗಜ್ಜ ತುಳುನಾಡಿನ ಅತ್ಯಂತ ಕಾರಣಿಕದ ದೈವ. ದೈವಗಳ ನೂತನ ಭಂಡಾರಗುಡಿ ನಿರ್ಮಾಣ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗುವುದು ನಮ್ಮ ಸೌಭಾಗ್ಯ. ಹಿರಿಯರು ಸ್ಥಾಪಿಸಿರುವ ಈ ಕ್ಷೇತ್ರದಿಂದ ಇಂದು ನಾಡಿಗೆ ಹಾಗೂ ಜನರಿಗೆ ಒಳಿತಾಗುತ್ತಿದೆ” ಎಂದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ಜಗದೀಶ್ ಆಳ್ವ ಕುವೆತ್ತಬೈಲ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಆಡಳಿತ ಸಮಿತಿ ಅಧ್ಯಕ್ಷರಾದ ಪ್ರವೀಣ್ ರೈ, ಕ್ಷೇತ್ರದ ಹಿರಿಯರಾದ ದಾಮೋದರ ಸುವರ್ಣ, ಮಹಿಳಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸುಮಲತಾ, ಕೋಟೆಕಾರ್ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಪ್ರವೀಣ್ ಬಗಂಬಿಲ, ಮಾಡೂರು ಶ್ರೀ ಪಾಡಂಗರ ಭಗವತೀ ಕ್ಷೇತ್ರದ ಕಾರ್ಯದರ್ಶಿ ನಿಶಿತ್ ಬೋಳಾರ್, ನಿತ್ಯಾನಂದ ಯುವಕ ಮಂಡಲದ ಪ್ರಮುಖರಾದ ದಯಾನಂದ ತೊಕ್ಕೊಟು, ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಚೆಂಬುಗುಡ್ಡೆ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕರಾದ ನಾಗೇಶ್ ಸಾಲ್ಯಾನ್ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಚಾಲಕರಾದ ನಾರಾಯಣ ಬಿ. ವಂದಿಸಿದರು. ರೋಹಿತಾಕ್ಷ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

Exit mobile version