Site icon Ullalavani

71ನೇ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯು.ಎಸ್. ಅಬೂಬಕ್ಕರ್ ಹಾಜಿಗೆ ಸನ್ಮಾನ

ಕುಂಪಲ: ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ 71ನೇ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಭಾಜನರಾದ ಕುಂಪಲದ ನೂರಾನಿ ಯತೀಂ ಖಾನಾದ ಅಧ್ಯಕ್ಷರಾದ ಯು.ಎಸ್. ಅಬೂಬಕ್ಕರ್ ಹಾಜಿ ಅವರನ್ನು ಸಂಸ್ಥೆಯ ವತಿಯಿಂದ ಭವ್ಯವಾಗಿ ಸನ್ಮಾನಿಸಲಾಯಿತು.

ಕುಂಪಲದ ನೂರಾನಿ ಯತೀಂ ಖಾನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯು.ಎಸ್. ಅಬೂಬಕ್ಕರ್ ಹಾಜಿ ಅವರಿಗೆ ವಿಶೇಷ ಸ್ಮರಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕೆ.ಎಂ. ಅಬ್ದುಲ್ಲಾ ಹಾಜಿ, ಇಕ್ಬಾಲ್ ಹಾಜಿ, ಮಹಮ್ಮದ್ ಹಾಜಿ, ನಜೀರ್, ಬಾವ ಹಾಜಿ, ಪಾರೆ ಅಬ್ದುಲ್ ಇಸ್ಮಾಯಿಲ್, ಅಬ್ದುಲ್ ಸತ್ತಾರ್, ಕೆ.ಎಂ. ಅಬ್ದುಲ್ ಸಮದ್, ಕೆ.ಎಂ. ಅಬ್ದುಲ್, ಎನ್.ಎಸ್. ಉಮರ್, ರಹೀಂ ಕೆ.ಎಂ., ಫತ್ತಾಹ್, ಫಾರೂಕ್ ಉಳ್ಳಾಲ್, ಮ್ಯಾನೇಜರ್ ಮೂಸಾ, ಜಬೀರ್ ಯು.ಎಸ್., ಸಲೀಂ ಯು.ಎಸ್., ಆರಿಫ್ ಯು.ಎಸ್. ಸೇರಿದಂತೆ ಸಮಾಜದ ಗಣ್ಯರು, ಸಂಸ್ಥೆಯ ಉಸ್ತಾದ್‌ಗಳು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Exit mobile version