Site icon Ullalavani

ಭಿಕ್ಷೆ ಬೇಡಿದ ಬಾಲಕನಿಗೆ ಕಾಲಿನಿಂದ ಒದ್ದ ಸಚಿವೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಭೋಪಾಲ್: ಭಿಕ್ಷೆ ಬೇಡುತ್ತಿದ್ದ ಬಾಲಕನಿಗೆ ಮಧ್ಯ ಪ್ರದೇಶದ ಪಶುಸಂಗೋಪನೆ ಸಚಿವೆ ಕುಸುಮ್ ಮೆಹೆದೆಲೆ ಕಾಲಿನಿಂದ ಒದ್ದಿರುವ ಘಟನೆ ನಡೆದಿದೆ.

ಪನ್ನಾ ಜಿಲ್ಲೆಯಲ್ಲಿ ೬೦ನೇ ರಾಜ್ಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸ್ವಚ್ಛ ಅಭಿಯಾನದಲ್ಲಿ ಭಾಗವಹಿಸಿದ್ದ ಸಚಿವೆ ಕಾರ್ಯಕ್ರಮದ ಮುಗಿದ ಬಳಿಕ ತನ್ನ ಕಾರಿನ ಬಳಿ ಬರುತ್ತಿದ್ದ ಸಂದರ್ಭದಲ್ಲಿ ೧೦ವರ್ಷ ಪ್ರಾಯದ ಬಾಲಕ ಭಿಕ್ಷೆ ನೀಡುವುದಾಗಿ ಕೇಳಿದ್ದಾನೆ ಈ ವೇಳೆ ಸಚಿವೆ ಬಾಲಕನನ್ನು ಕಾಲಿನಿಂದ ಒದ್ದು ತನ್ನ ಕಾರಿನಲ್ಲಿ ಕುಳಿತುಕೊಂಡು ಹೋದ ದೃಶ್ಯ ವೀಡಿಯೋ ಒಂದರಲ್ಲಿ ಬಹಿರಂಗವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ಸಚಿವೆಯ ಈ ವರ್ತನೆಗೆ ದೇಶದ್ಯಾಂತ ಆಕ್ರೋಶ ವ್ಯಕ್ತವಾಗಿದೆ.

Exit mobile version