Site icon Ullalavani

ಮಂಗಳೂರು: ಕ್ಯೂಎಸ್ ವಿಶ್ವ ವಿಶ್ವವಿದ್ಯಾನಿಲಯ ಶ್ರೇಯಾಂಕದಲ್ಲಿ ಮಂಗಳೂರು ವಿವಿಗೆ ರಾಜ್ಯದಲ್ಲಿ ಎರಡನೇ ಸ್ಥಾನ

ಕೊಣಾಜೆ : 2026ರ ನವೆಂಬರ್ 3ರಂದು ಪ್ರಕಟಗೊಂಡ ಕ್ಯೂಎಸ್ (QS) ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಏಷ್ಯಾ 2027ರ ವಿಭಾಗದ ಶ್ರೇಯಾಂಕದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು 901-950ರ ಶ್ರೇಣಿಯಲ್ಲಿ ಸ್ಥಾನ ಪಡೆದಿದೆ. ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳ ವಿಭಾಗಗಳ ಪೈಕಿ ಮಂಗಳೂರು ವಿಶ್ವವಿದ್ಯಾಲಯವು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಕ್ಯೂಎಸ್ (QS) ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಏಷ್ಯಾ2027 ವಿಭಾಗದ ಶ್ರೇಯಾಂಕದಲ್ಲಿ 901-950ರ ಶ್ರೇಣಿಯಲ್ಲಿ ಸ್ಥಾನ ಪಡೆದಿರುವ ಮಂಗಳೂರು ವಿಶ್ವವಿದ್ಯಾಲಯವು ದಕ್ಷಿಣ ಏಷ್ಯಾ ಮಟ್ಟದಲ್ಲಿ 287ನೇ ಹಾಗೂ ಭಾರತದಲ್ಲಿ 153ನೇ ಸ್ಥಾನವನ್ನು ಪಡೆದುಕೊಂಡಿದೆ.

ಮೈಸೂರು ವಿಶ್ವವಿದ್ಯಾಲಯವು 801-850ರ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದು, ಬೆಂಗಳೂರು ವಿಶ್ವವಿದ್ಯಾಲಯವು ಮಂಗಳೂರು ವಿಶ್ವವಿದ್ಯಾಲಯದ ಸಮಾನ ಶ್ರೇಣಿಯಲ್ಲಿದೆ.
ಈ ಬಾರಿ ಭಾರತದ ಒಟ್ಟು 325 ವಿಶ್ವವಿದ್ಯಾಲಯಗಳು ಶ್ರೇಯಾಂಕ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.
ಕ್ಯೂಎಸ್ ಶ್ರೇಯಾಂಕವು ಉನ್ನತ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಖ್ಯಾತಿ, ಸಂಶೋಧನಾ ಸಾಧನೆ, ಬೋಧನೆಯ ಗುಣಮಟ್ಟ ಉದ್ಯೋಗಾವಕಾಶ ಮತ್ತು ಅಂತರರಾಷ್ಟ್ರೀಕರಣ ಸೇರಿದಂತೆ ವಿವಿಧ ಮಾನದಂಡಗಳನ್ನು ಆಧರಿಸಿ ಮೌಲ್ಯಮಾಪನ ಮಾಡುತ್ತದೆ.
ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿ ಹೊಂದಿರುವ ಬೋಧಕ ಸಿಬ್ಬಂದಿಯ ಪ್ರಮಾಣ ಹಾಗೂ ಸ್ಕೋಪಸ್ (Scopus) ದತ್ತಾಂಶದಲ್ಲಿ ಸೂಚ್ಯಂಕಿತಗೊಂಡಿರುವ ಪ್ರತಿ ಅಧ್ಯಾಪಕರ ಸಂಶೋಧನಾ ಪ್ರಕಟಣೆಗಳ ಸಂಖ್ಯೆಯಂತಹ ಪ್ರಮುಖ ಮಾನದಂಡಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. “ಈ ಸಾಧನೆಯು ವಿಶ್ವವಿದ್ಯಾಲ ಯದ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದ ಪ್ರಗತಿಯನ್ನು ಪ್ರತಿಬಿಂಬಿಸಿದೆ ” ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಕಟನೆ ತಿಳಿಸಿದೆ.

Exit mobile version