ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತಲಪಾಡಿ : ವ್ಯಕ್ತಿಗಿಂತ ಪಕ್ಷ ಶ್ರೇಷ್ಠ, ಪಕ್ಷಕ್ಕಿಂತ ದೇಶ ಶ್ರೇಷ್ಠ , ಪಕ್ಷದ ಸದಸ್ಯನಾಗಿ, ಸದಸ್ಯ ಕಾರ್ಯಕರ್ತನಾಗಿ, ಕಾರ್ಯಕರ್ತ ಆದರ್ಶ ನಾಯಕನಾಗಿ ರೂಪುಗೊಳ್ಳುವುದು ಪ್ರಶಿಕ್ಷಣ ವರ್ಗದ ಉದ್ದೇಶ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಮಾಜಿ ಸದಸ್ಯೆ ಲಲಿತಾ ಸುಂದರ್ ವಹಿಸಿದ್ದರು.
ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ದ.ಕ.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಕುಂಪಲ ಉಪಸ್ಧಿತರಿದ್ದರು.
ಹರೀಶ್ ಅಂಬ್ಲಮೊಗರು ಹಾಗೂ ಯಶವಂತ್ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು. ಪ್ರವೀಣ್ ಸುಜೀರ್ ಸ್ವಾಗತಿಸಿದರು. ಹರಿಯಪ್ಪ ಸಾಲ್ಯಾನ್ ವಂದಿಸಿದರು