Site icon Ullalavani

ಬಡವರ ಜೀವ ಉಳಿಸಲು 24×7 ಸಾರ್ವಜನಿಕ ಸಹಕಾರ ಹಸ್ತ ಅಂಬುಲೆನ್ಸ್ ಸೇವೆ: ಬ್ರಹ್ಮರಕೂಟ್ಲಿನಲ್ಲಿ ತುಳುನಾಡ ಜವನಿಯೆರ್ ನೇತೃತ್ವದ ಬಿ.ಎನ್.ಸಿ. ಸೇವಾ ಸುರಕ್ಷ ತಂಡದ ಜನಪರ ಹೆಜ್ಜೆ

ಬಂಟ್ವಾಳ: ಆರೋಗ್ಯ ಪ್ರತಿಯೊಬ್ಬರ ಮೂಲಭೂತ ಅಗತ್ಯ. ಅದರಲ್ಲೂ ತುರ್ತು ವೈದ್ಯಕೀಯ ಪರಿಸ್ಥಿತಿಯಲ್ಲಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪುವುದು ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಂತಹ ಸಂದರ್ಭದಲ್ಲಿ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ನೆರವಾಗುವ ಉದ್ದೇಶದಿಂದ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು–ಕಳ್ಳಿಗೆ ಪರಿಸರದಲ್ಲಿ ಬಿ.ಎನ್.ಸಿ. ಸೇವಾ ಸುರಕ್ಷ ತಂಡವು 24×7 ಅಂಬುಲೆನ್ಸ್ ಸೇವೆಯನ್ನು ಆರಂಭಿಸಿದೆ.

ಬ್ರಹ್ಮರಕೂಟ್ಲು ತುಳುನಾಡ ತುಳುವ ಜವನಿಯೆರ್ ಒಳಗೊಂಡ ಬಿ.ಎನ್.ಸಿ. ಸೇವಾ ಸುರಕ್ಷ ಮತ್ತು ಕ್ರಿಕೆಟರ್ಸ್ ತಂಡದ ಅವರ ಕಲ್ಪನೆ ಮತ್ತು ದೂರದೃಷ್ಟಿಯ ಚಿಂತನೆಯ ಫಲವಾಗಿ ಈ ಜನಪರ ಯೋಜನೆ ರೂಪುಗೊಂಡಿದೆ. ಬಡ ರೋಗಿಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಅವರು, ತುರ್ತು ಸಂದರ್ಭದಲ್ಲಿ ಹಣದ ತೊಂದರೆಯಿಂದ ಯಾರೂ ಅಂಬುಲೆನ್ಸ್ ಸೇವೆಯಿಂದ ವಂಚಿತರಾಗಬಾರದು ಎಂಬ ಆಶಯದೊಂದಿಗೆ ಸಾರ್ವಜನಿಕರ ಸಹಕಾರ ಪಡೆದು ಅಂಬುಲೆನ್ಸ್ ಖರೀದಿಸುವ ನಿರ್ಧಾರ ಕೈಗೊಂಡರು.

ಬಿ.ಎನ್.ಸಿ. ಸೇವಾ ಸುರಕ್ಷ ಮತ್ತು ಕ್ರಿಕೆಟರ್ಸ್ ತಂಡದ ನಾಯಕರ
ಈ ಸೇವೆಯ ನಿರಂತರ ನಿರ್ವಹಣೆಯ ಜವಾಬ್ದಾರಿಯನ್ನು ರಂಜನ್ ದರಿಬಾಗಿಲು ಮತ್ತು ಶೈಲೇಶ್ ದರಿಬಾಗಿಲು ಅವರು ವಹಿಸಿಕೊಂಡಿದ್ದು, ದಿನದ 24 ಗಂಟೆಯೂ ಚಾಲಕ ಸೇವೆ ಒದಗಿಸಲು ಮುಂದಾಗಿದ್ದಾರೆ

ಹಾಗೂ ಸರ್ವ ಸದಸ್ಯರ ಸಹಕಾರ ಮತ್ತು ಆಡಳಿತ ವ್ಯವಸ್ಥೆಯ ಮೂಲಕ ಈ ಸೇವೆ ಕಾರ್ಯರೂಪಕ್ಕೆ ಬಂದಿದೆ. ಊರಿನ ಹಿರಿಯ ಗಣ್ಯ ವ್ಯಕ್ತಿಗಳಿಂದ ಅಂಬುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಿಸಿದರು.

ತುರ್ತು ಸಂದರ್ಭದಲ್ಲಿ ಬಡವರ ಪಾಲಿಗೆ ಅಂಬುಲೆನ್ಸ್ ಕೇವಲ ವಾಹನವಾಗಿರದೆ, ಜೀವ ಉಳಿಸುವ ಸಂಜೀವಿನಿ. 24 ಗಂಟೆಯೂ ಲಭ್ಯವಾಗುವ ಸಾರ್ವಜನಿಕ ಸಹಕಾರ ಹಸ್ತದೊಂದಿಗೆ ಬ್ರಹ್ಮರಕೂಟ್ಲು, ಕಳ್ಳಿಗೆ,ತುಂಬೆ ಹಾಗೂ ಸುತ್ತಮುತ್ತಲಿನ ಪರಿಸರದ ಜನರಿಗೆ ಮಹತ್ವದ ನೆರವಾಗುವ ನಿರೀಕ್ಷೆಯಿದೆ.

ಜನಸೇವೆ ಎಂದರೆ ಕೇವಲ ಮಾತಲ್ಲ; ಜನರಿಗೆ ಅತ್ಯಂತ ಅಗತ್ಯವಿರುವ ಸಂದರ್ಭದಲ್ಲಿ ನೆರವಿನ ಹಸ್ತ ಚಾಚುವುದೇ ನಿಜವಾದ ಮಾನವೀಯತೆ ಎಂಬುದಕ್ಕೆ ಬಿ.ಎನ್.ಸಿ. ಸೇವಾ ಸುರಕ್ಷ ತಂಡದ ಈ ಪ್ರಯತ್ನ ಮಾದರಿಯಾಗಿದೆ.

Exit mobile version