ಉಡುಪಿ, ಅ.30 : ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಇಬ್ಬರು ಮೀನುಗಾರರು ನಾಪತ್ತೆಯಾದ ಪ್ರತ್ಯೇಕ ಘಟನೆ ಕೊಡವೂರು ಗ್ರಾಮದ ಮಲ್ಪೆ ಬಂದರಿನಲ್ಲಿ ನಡೆದಿದೆ.
ಕೊಡವೂರು ಗ್ರಾಮದ ಮಲ್ಪೆ ಬಂದರಿನಲ್ಲಿ ಶ್ರೀರಾಂಜನೇಯ ಪರ್ಸಿನ್ ಬೋಟ್‌ನಲ್ಲಿ ಮೀನುಗಾರಿ ಕೆಗೆ ತೆರಳಿದ್ದ ದ್ವಾರಿಕಾ ಶಿಕಾರ್ (28) ಹಾಗೂ ಓಂ ಶ್ರೀದತ್ತ ಮೀನುಗಾರಿಕಾ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಪ್ರಮೋದ್ ಗೌಡ (53) ನಾಪತ್ತೆಯಾದ ಮೀನುಗಾರರು.
ಈ ಇಬ್ಬರು ವ್ಯಕ್ತಿಗಳು ಪ್ರತ್ಯೇಕ ಪ್ರಕರಣಗಳಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ಕಾಣೆಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಪೊಲೀಸ್ ಠಾಣೆ ಸಂಪರ್ಕಿಸಬಹುದಾಗಿದೆ.ಇವರಿಬ್ಬರ ಸುಳಿವು ದೊರೆತಲ್ಲಿ ದೂರವಾಣಿ ಸಂಖ್ಯೆ 0820- 2537999, 9480805447 ಸಂಪರ್ಕಿಸುವಂತೆ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕರ ಪ್ರಕಟಣೆ ಹೊರಡಿಸಿದ್ದಾರೆ.