ಹರೇಕಳ: ಬದುಕು ಎಷ್ಟೇ ಕಠಿಣವಾಗಿದ್ದರೂ ಕಠಿಣ ಪರಿಶ್ರಮ, ಸನ್ಮಾರ್ಗ ಹಾಗೂ ದೃಢ ಸಂಕಲ್ಪದ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬುದನ್ನು ಮಹರ್ಷಿ ವಾಲ್ಮೀಕಿಯವರ ವ್ಯಕ್ತಿತ್ವದಿಂದ ತಿಳಿದುಕೊಳ್ಳಬಹುದು ಎಂದು ಗಣಿತ ಅಧ್ಯಾಪಕ ಕೃಷ್ಣ ಶಾಸ್ತ್ರಿ ಅಭಿಪ್ರಾಯಪಟ್ಟರು.
ಅವರು ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಸಂದರ್ಭದಲ್ಲಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಮೋಹಿನಿ ಮಾತನಾಡಿ, ಜಗತ್ತಿಗೆ ಅಕ್ಷರದ ಶಕ್ತಿ ಹಾಗೂ ಕಾವ್ಯದ ಸೌಂದರ್ಯವನ್ನು ಪರಿಚಯಿಸಿದವರು ಮಹರ್ಷಿ ವಾಲ್ಮೀಕಿ. ಅವರ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಅಬ್ದುಲ್ ಸಝಿಲ್, ಮುಹಮ್ಮದ್ ಸಫ್ವನ್ ಶಾಹಿರ್, ರಿಯಾನ ಅಫ್ಸ ಹಾಗೂ ಆಯಿಷಾ ರೈಫಾ ಅವರನ್ನು ಅಭಿನಂದಿಸಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಮ್ ಹರೇಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸ್ಮಿತಾ ವಂದಿಸಿದರು. ಶಿಕ್ಷಕಿಯರಾದ ಯಶಸ್ವಿನಿ, ಭವ್ಯ ಹಾಗೂ ಸಿಬ್ಬಂದಿಗಳಾದ ಮೋಹನ್ ಮತ್ತು ರವೀಶ್ ಸಹಕರಿಸಿದರು.