Site icon Ullalavani

ಪಿಕಪ್ ಢಿಕ್ಕಿ ಹೊಡೆಸಿ ಕೊಲೆ, ಮೃತರ ಮನೆಗೆ ಬಿಜೆಪಿ ನಿಯೋಗ ಭೇಟಿ

ಉಳ್ಳಾಲ‌: ಐದು ದಿನಗಳ ಹಿಂದೆ ಬೋಳಿಯಾರ್ ಸಮೀಪ ಪಿಕಪ್ ಢಿಕ್ಕಿ ಹೊಡೆದು ಕೊಲೆಗೀಡಾದವರ ಮನೆಗೆ ಬಿಜೆಪಿ ಮಂಗಳೂರು ಕ್ಷೇತ್ರ ಅಲ್ಪಸಂಖ್ಯಾತ ಮೋರ್ಚಾ ನೇತೃತ್ವದಲ್ಲಿ ನಿಯೋಗ ಶುಕ್ರವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿತು.


ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಿಯೋಗ, ಕಾನೂನು ಹೋರಾಟದಲ್ಲಿ ಕೊನೆವರೆಗೂ ಜೊತೆಗಿರುತ್ತೇವೆ, ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಅಗತ್ಯವಿದ್ದಲ್ಲಿ ಪ್ರತ್ಯೇಕ ನ್ಯಾಯವಾದಿಯನ್ನು ನೇಮಿಸುವ ಹಾಗೂ ಇತರ ಎಲ್ಲಾ ರೀತಿಯ ನೆರವು ನೀಡುವುದಾಗಿ ನಿಯೋಗ ಭರವಸೆ ನೀಡಿತು.ಮೃತರ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದು ಮಾನವೀಯ ನೆಲೆಯಲ್ಲಿ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಆಗ್ರಹಿಸಿತು.

ಈ ಸಂದರ್ಭ ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಜಗದೀಶ್ ಆಳ್ಗ ಕುವೆತ್ತಬೈಲ್, ಜಿಲ್ಲಾ ವಕ್ತಾರ ಹೇಮಂತ್ ಶೆಟ್ಟಿ ದೇರಳಕಟ್ಟೆ,ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ಎ.ಶಹನವಾಝ್ ಕೂಳೂರು, ಮಂಗಳೂರು ಕ್ಷೇತ್ರಾಧ್ಯಕ್ಷ ಸಿದ್ದೀಕ್ ತಲಪಾಡಿ, ಜಿಲ್ಲಾ ಉಪಾಧ್ಯಕ್ಷ ಅಸ್ಗರ್ ಮುಡಿಪು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತಸ್ಲೀಂ‌ ಹರೇಕಳ, ಉಪಾಧ್ಯಕ್ಷ ಕಲಂದರ್ ಕೋಟೆಕಾರ್, ಮಾಜಿ ಅಧ್ಯಕ್ಷ ಕರೀಂ ಉಚ್ದಿಲ್, ಮುಖಂಡರಾದ ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.

Exit mobile version