Site icon Ullalavani

ಜ. -23 ಕುತ್ತಾರಿನ ರಾಜರಾಜೇಶ್ವರಿ ಹಾಲ್‌ನಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ

ಉಳ್ಳಾಲ: 2026-27ನೆ ಸಾಲಿನ 30ನೇ ವರ್ಷದ ವೀರರಾಣಿ ಅಬ್ಬಕ್ಕ ಉತ್ಸವವನ್ನು 2027ರ ಜನವರಿ 23ರಂದು ಕುತ್ತಾರಿನ ರಾಜರಾಜೇಶ್ವರಿ ಹಾಲ್‌ನಲ್ಲಿ ನಡೆಸಲಾಗುವುದು ಎಂದು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್ ಹೇಳಿದ್ದಾರೆ.

ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು ಅಬ್ಬಕ್ಕ ಉತ್ಸವದಲ್ಲಿ ಪ್ರತಿವರ್ಷದಂತೆ ಈ ಸಲವೂ ವಂದನಾ ಕಾರ್ಯಕ್ರಮ, ಬಹುಭಾಷಾ ಕವಿಗೋಷ್ಠಿ ತುಳು ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ, ಬ್ಯಾರಿ ಮತ್ತು ಕೊಂಕಣಿ ಕಾರ್ಯಕ್ರಮ, ನಾಟಕ, ಯಕ್ಷಗಾನ, ಸಮಾರೋಪ ಕಾರ್ಯಕ್ರಮದಲ್ಲಿ ಇಬ್ಬರು ಮಹಿಳೆಯರಿಗೆ ಅಬ್ಬಕ್ಕ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ.ಜಯರಾಮ ಶೆಟ್ಟಿ ಮಾತನಾಡಿ ಕಳೆದ 30 ವರ್ಷಗಳಿಂದ ಅಬ್ಬಕ್ಕ ಉತ್ಸವ ಸಮಿತಿಯು ಪೋರ್ಚುಗೀಸರ ವಿರುದ್ಧ ಹೋರಾಡಿದ ಕೆಚ್ಚೆದೆಯ ರಾಣಿ ಅಬ್ಬಕ್ಕಳ ಹೆಸರನ್ನು ದೇಶವ್ಯಾಪಿ ಪಸರಿಸುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ಸಮಿತಿಯ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿಗಟ್ಟಿ, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ, ಉಪಾಧ್ಯಕ್ಷೆ ದೇವಕಿ ಉಳ್ಳಾಲ್, ಪದಾಧಿಕಾರಿಗಳಾದ ರಾಘವ ಡಿ.ಎನ್, ಮಾಧವ ಉಳ್ಳಾಲ್, ಪ್ರವೀಣ್ ಕುಮಾರ್, ನಾಗೇಶ್ ಗಟ್ಟಿ ಮೇಲ್ಮನೆ, ಶಶಿಕಲಾ ಗಟ್ಟಿ, ಅನುಪಮ ಸಿ, ಮಾಧವಿ ಉಳ್ಳಾಲ್, ಶಶಿಕಾಂತಿ, ರಾಜೀ ಕೆಂಪುಮಣ್ಣು ಸತ್ಯವತಿ ಜೆ.ಕೆ, ಸರೋಜಾ ಕುಮಾರಿ, ಸ್ವಪ್ನಾ, ಲತಾ ತಲಪಾಡಿ, ಜಯಶ್ರೀ ಕೆ. ನಾಗರತ್ನ ಗಟ್ಟಿ ಹೇಮಾ ಪ್ರವೀಣ್, ಶೋಭಾ ವಸಂತ್, ಮಮತಾ, ಚಂದ್ರಕಲಾ, ಸುರೇಖಾ ಆಳ್ವ, ಕಸ್ತೂರಿ, ಡಾ.ಭಾರತಿ ಪಿಲಾರ್ ಉಪಸ್ಥಿತರಿದ್ದರು.

Exit mobile version