ಉಳ್ಳಾಲ: ಕೋಟೆಪುರದ ಹಿನ್ನೀರಿನಲ್ಲಿರುವ ಸಣ್ಣ ದ್ವೀಪವೊಂದರಲ್ಲಿ ಇಂದು ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಮೃತದೇಹ ಪತ್ತೆಯಾಗಿದೆ.
ವಿಷಯ ತಿಳಿದ ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ಅಲ್ಲಿಂದ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್ನೆಟ್ ಮೀನುಗಾರರ ಸಂಘದ ಸದಸ್ಯರು ಪೊಲೀಸರಿಗೆ ಅಗತ್ಯ ನೆರವು ನೀಡಿದರು.
ಸಂಘದ ಅಧ್ಯಕ್ಷರಾದ ಆಸಿಫ್ ಎಂ.ಬಿ. ಅವರ ನೇತೃತ್ವದಲ್ಲಿ ನಜೀರ್ ಕೋಡಿ, ನಿಜಾಮ್ ಕೋಡಿ, ಔದ್ರಮ ಮತ್ತು ಸಲ್ಮಾನ್ ಸೇರಿದಂತೆ ಸಂಘದ ಸದಸ್ಯರು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಮೃತದೇಹವನ್ನು ಸ್ಥಳಾಂತರಿಸಲು ಸಹಕರಿಸಿದರು.
ಮೃತದೇಹದ ಗುರುತು ಹಾಗೂ ಸಾವಿಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಕಾರ್ಯಾಚರಣೆಗೆ ಸಹಕರಿಸಿದ ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್ನೆಟ್ ಮೀನುಗಾರರ ಸಂಘದ ಸದಸ್ಯರ ಮಾನವೀಯ ಸೇವೆ ಸ್ಥಳೀಯರ ಗಮನ ಸೆಳೆದಿದೆ.
