ಉಳ್ಳಾಲ: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ 100ನೇ ವಾರ್ಷಿಕೋತ್ಸವದ ಅಂಗವಾಗಿ SSF ಉಳ್ಳಾಲ ಸೆಕ್ಟರ್ ಹಾಗೂ ಮುಕ್ಕಚೇರಿ ಯೂನಿಟ್ನ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಅ. 18ರಂದು ಪೇಟೆ ಹಜ್ರತ್ ಶಾಲೆಯಲ್ಲಿ ನಡೆದ ಶಿಬಿರವನ್ನು ಮುಕ್ಕಚೇರಿ ಜುಮ್ಮಾ ಮಸೀದಿಯ ಖತೀಬರಾದ ಬಹುಮಾನ್ಯ ಶರೀಫ್ ಬಾಖವಿ ಉಸ್ತಾದ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ KCF ದುಬೈಯ ನೇತಾರರಾದ ಶುಕೂರ್ ಹಾಜಿ, SSF ಉಳ್ಳಾಲ ಸೆಕ್ಟರ್ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮುಕ್ಕಚೇರಿ ಯೂನಿಟ್ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕರ್ನಾಟಕ ಮುಸ್ಲಿಂ ಜಮಾಅತ್ ಉಳ್ಳಾಲ ವಲಯದ ನೇತಾರರು ಹಾಗೂ SYS ಉಳ್ಳಾಲ ಘಟಕದ ನೇತಾರರು ಉಪಸ್ಥಿತರಿದ್ದರು.