ತೊಕ್ಕೊಟ್ಟು: ಭಗತ್ ಸಿಂಗ್ ಸೇವಾ ಪ್ರತಿಷ್ಠಾನ (ರಿ.), ತೊಕ್ಕೊಟ್ಟು, ಉಳ್ಳಾಲ ಗೂಡುದೀಪ ಸ್ಪರ್ಧಾ ಸಮಿತಿಯ ವತಿಯಿಂದ ನಡೆಯಲಿರುವ 18ನೇ ವರ್ಷದ ಗೂಡುದೀಪ ಸಂಗಮ – ದೀಪಾವಳಿ ಸಂಭ್ರಮ 2026 ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಂಸ್ಥೆಯ ಗೌರವ ಸಲಹೆಗಾರರಾದ ಆನಂದ ಕೆ. ಅಸೈಗೋಳಿ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಗೌರವಾಧ್ಯಕ್ಷ ರಾಕೇಶ್ ಕುಮಾರ್, ಉಪಾಧ್ಯಕ್ಷ ಮಾಧವ ಉಳ್ಳಾಲ, ಗೂಡುದೀಪ ಸ್ಪರ್ಧಾ ಸಮಿತಿಯ ಪ್ರಧಾನ ಸಂಚಾಲಕ ದಾಮೋದರ ನಡಾರ್, ಕೋಶಾಧಿಕಾರಿ ಪ್ರಸಾದ್ ಕೊಂಡಾಣ, ಸ್ಪರ್ಧಾ ಸಮಿತಿಯ ಸಂಚಾಲಕರಾದ ರಾಜೇಂದ್ರ ಸೇವಂತಿಗುಡ್ಡೆ ಹಾಗೂ ಲಕ್ಷ್ಮೀನಾರಾಯಣ, ಗುರುವಂದನೆ ಸಂಚಾಲಕ ಮೋಹನ್ ಸಾಲ್ಯಾನ್, ಪ್ರಮುಖರಾದ ನವೀನ್ ಎ.ಕೆ., ನಟರಾಜ್ ತೊಕ್ಕೊಟ್ಟು, ಪ್ರತೀಕ್ ನಡಾರ್ ಹಾಗೂ ಸತೀಶ್ ಪೂಜಾರಿ ಉಪಸ್ಥಿತರಿದ್ದರು.