Site icon Ullalavani

ಡಾ. ನೀಕ್ಷಿತಾ ವಿ. ಶೆಟ್ಟಿ ಅವರಿಗೆ ಪಿಎಚ್.ಡಿ. ಪದವಿ

ಮಂಗಳೂರು: ಯೆನೆಪೊಯ (ಡೀಮ್ಡ್ ಟು ಬಿ ಯೂನಿವರ್ಸಿಟಿ) ವತಿಯಿಂದ ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ನಿರ್ವಹಣಾ ವಿಭಾಗದ ಮುಖ್ಯಸ್ಥೆ ಡಾ. ನೀಕ್ಷಿತಾ ವಿ. ಶೆಟ್ಟಿ ಅವರಿಗೆ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಗಿದೆ.

ಅವರು ಸಲ್ಲಿಸಿದ ಟ್ಯಾಲೆಂಟ್ ರಿಟೆನ್ಷನ್ ಸ್ಟ್ರಾಟಜೀಸ್ ಇನ್ ಹೈಯರ್ ಎಜುಕೇಶನ್ ಸೆಕ್ಟರ್: ಎ ಸ್ಟಡಿ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ, ಇಂಡಿಯಾ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಈ ಪದವಿ ಲಭಿಸಿದೆ. ಯೆನೆಪೊಯ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್ ಹಾಗೂ ಉಪಪ್ರಾಂಶುಪಾಲರಾದ ಡಾ. ಶರೀನಾ ಪಿ. ಅವರ ಮಾರ್ಗದರ್ಶನದಲ್ಲಿ ಡಾ. ನೀಕ್ಷಿತಾ ವಿ. ಶೆಟ್ಟಿ ಅವರು ಈ ಸಂಶೋಧನೆಯನ್ನು ಕೈಗೊಂಡಿದ್ದರು. ಇವರು ಉಳ್ಳಾಲದ ಬಬ್ಬುಕಟ್ಟೆಯ ವಿಶ್ವನಾಥ ಶೆಟ್ಟಿ ಮತ್ತು ನೇತ್ರಾಕ್ಷಿ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದಾರೆ.

Exit mobile version