Site icon Ullalavani

ಕಲ್ಲೂರು ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಯು.ಟಿ. ಖಾದರ್ ಜನ್ಮ ದಿನಾಚರಣೆ

ಮಂಜೇಶ್ವರ : ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಜ್ಜ್ , ವಕ್ಫ್ ಮತ್ತು ಅಲ್ಪಸಂಖ್ಯಾತ ಖಾತೆ ಸಚಿವ ಯು.ಟಿ. ಖಾದರ್ ಅವರ ಜನ್ಮದಿನವನ್ನು ಕಲ್ಲೂರು ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಆಚರಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಡಾಕ್ಟರ್ ಇಬ್ರಾಹಿಂ ಹಾಜೀ ಕಲ್ಲೂರು ರವರು ವರ್ಕಾಡಿ ದೈಗೋಳಿಯ ಶ್ರೀ ಸತ್ಯಸಾಯಿ ಸೇವಾ ಅನಾಥಾಲಯಕ್ಕೆ ತೆರಳಿ ಹಣ್ಣು ಹಂಪಲುಗಳನ್ನು ವಿತರಿಸಿದರು.

ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ, ದಿವಾಕರ ಎಸ್ ಜೆ , ಶಾಂತಾ ಆರ್ ನಾಯ್ಕ್, ವಿಕ್ಟರ್ ವೇಗಸ್, ಐರಿನ್ ಡಿಸೋಜ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಲ್ಲೂರು ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿ ಅಝೀಝ್ ಕಲ್ಲೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದೈಗೋಳಿ ಶ್ರೀ ಸತ್ಯ ಸಾಯಿ ಸೇವಾ ಟ್ರಸ್ಟ್ ನ ಡಾ. ಉದಯಕುಮಾರ್ ವಂದಿಸಿದರು.

Exit mobile version