Site icon Ullalavani

ಬಾಳೆಪುಣಿ ಬದ್ರಿಯಾ ಜುಮಾ ಮಸ್ಜಿದ್‌ಗೆ ನೂತನ ಆಡಳಿತ ಸಮಿತಿ

ಬಾಳೆಪುಣಿ ಬದ್ರಿಯಾ ಜುಮಾ ಮಸ್ಜಿದ್‌ನ ಆಡಳಿತ ಸಮಿತಿಯ ಮಹಾಸಭೆಯು ಅಕ್ಟೋಬರ್ 2ರಂದು ಶುಕ್ರವಾರ ಜುಮುಅ ನಮಾಝ್ ಬಳಿಕ ಮಸ್ಜಿದ್‌ನಲ್ಲಿ ನಡೆಯಿತು. ಎಂ.ಬಿ. ಅಬೂಬಕರ್ ಸಖಾಫಿ ಅವರ ದುಆದೊಂದಿಗೆ ಮಹಾಸಭೆ ಆರಂಭಗೊಂಡಿತು. ಪಿ.ಕೆ. ಮೊಯಿದಿನ್ ಹಾಜಿ ಇಂಪಿರಿಯೊ ಅಧ್ಯಕ್ಷತೆ ವಹಿಸಿದ್ದರು.

ಬಿ.ಕೆ. ಅಬ್ದುರ್ರಹ್ಮಾನ್ ಮದನಿ ಸ್ವಾಗತಿಸಿದರು. ರಫೀಕ್ ಬಿ.ಎನ್. ಅವರು ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಇಕ್ಬಾಲ್ ಸಿ.ಎಂ. ಅವರು ಮಸ್ಜಿದ್‌ನ ದುರಸ್ಥಿ ಕಾಮಗಾರಿಗೆ ಸಂಬಂಧಿಸಿದ ಲೆಕ್ಕ ವಿವರ ನೀಡಿದರು. ತಿಬಿಯಾನ್ ಲೆಕ್ಕವನ್ನು ರಫೀಕ್ ಬಿ.ಎನ್. ಮಂಡಿಸಿದರು.

ಮಹಾಸಭೆಯಲ್ಲಿ ಬಾಳೆಪುಣಿ ಬದ್ರಿಯಾ ಜುಮಾ ಮಸ್ಜಿದ್‌ಗೆ ನೂತನ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮೊಯ್ದೀನ್ ಕುಂಞಿ ಹಾಜಿ ಇಂಪಿರಿಯೊ, ಉಪಾಧ್ಯಕ್ಷರಾಗಿ ಮಹಮ್ಮದ್ ಹಾಜಿ ಹಾಗೂ ಎಚ್. ಉಮ್ಮರ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ. ಉಮ್ಮರ್ ಕುಂಞಿ ಆಯ್ಕೆಯಾದರು. ಜೊತೆ ಕಾರ್ಯದರ್ಶಿಗಳಾಗಿ ಇಕ್ಬಾಲ್ ಸಿ.ಎಂ. ಮತ್ತು ರಫೀಕ್ ಬಿ.ಎನ್. ಹಾಗೂ ಕೋಶಾಧಿಕಾರಿಗಳಾಗಿ ಎ.ಬಿ. ಮಹಮ್ಮದ್ ಹಾಜಿ ಮತ್ತು ಬಿ.ಎನ್. ಮೊಯ್ದೀನ್ ಆಯ್ಕೆಯಾದರು.

ಸದಸ್ಯರಾಗಿ ಬಿ.ಕೆ. ಅಬ್ದುರ್ರಹ್ಮಾನ್, ಉಮ್ಮರ್ ಹಾಜಿ, ಅಬೂಬಕ್ಕರ್ ಸಿ.ಎ. ಸಂಕ, ಅಬೂಬಕ್ಕರ್ ಪಾತಕಟ್ಟೆ, ಬಿ.ಪಿ. ಮೊಯ್ದೀನ್, ಮುಹಮ್ಮದ್ ಬಿ., ಮೋನು, ಹಸೈನಾರ್ ಬಡದಲ, ಮುಹಮ್ಮದ್ ಸಂಕ, ಮುಹಮ್ಮದ್ ಬಡದಳ ಹಾಗೂ ಬಿ.ಕೆ. ಇಬ್ರಾಹಿಂ ಅವರನ್ನು ಆಯ್ಕೆ ಮಾಡಲಾಯಿತು.

ಕೊನೆಯಲ್ಲಿ ಬಹು ಅಲಿ ಪೈಝಿ ಉಸ್ತಾದ್ ಅವರ ದುಆದೊಂದಿಗೆ ಮಹಾಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.

Exit mobile version