Site icon Ullalavani

ಕಿನ್ಯ ಕೇಂದ್ರ ಜುಮಾ ಮಸೀದಿ ಅಧೀನದಲ್ಲಿ ನೂತನ ಕ್ಯಾಂಟೀನ್ ಕೊಠಡಿ ಉದ್ಘಾಟನೆ

ಉಳ್ಳಾಲ: ಕಿನ್ಯ ಕೇಂದ್ರ ಜುಮಾ ಮಸೀದಿ ಅಧೀನದಲ್ಲಿ ನಡೆಯುತ್ತಿರುವ ಅಲ್ ಹಿದಾಯ ದರ್ಸ್ ವಿದ್ಯಾರ್ಥಿಗಳ ಹಾಗೂ ಅಲ್ ಮದ್ರಸತ್ಲ್ ಕುತುಬಿಯಾದ ಮುಅಲ್ಲಿಂಗಳಿಗೆ ಉಪಹಾರ ಸೇವನೆಗೆ ಅನುಕೂಲಕ್ಕಾಗಿ ನಿರ್ಮಾಣಗೊಂಡ ಕ್ಯಾಂಟೀನ್ ಕೊಠಡಿಯ ಉದ್ಘಾಟನೆ ಇತ್ತೀಚಿಗೆ ನಡೆಯಿತು.

ಸಯ್ಯಿದ್ ಬಾತಿಷಾ ತಂಙಳ್ ಕಟ್ಟಡ ಉದ್ಘಾಟಿಸಿ ಮಾತನಾಡಿ , ಕ್ಯಾಂಟೀನ್ ಕೊಠಡಿ ಕಟ್ಟಡ ನಿರ್ಮಾಣ ಮಾಡಿರುವುದು ಸ್ವಾಗತಾರ್ಹ ಎಂದರು. ಸಯ್ಯಿದ್ ಅಮೀರ್ ತಂಙಳ್ ದುಆ ನೆರವೇರಿಸಿದರು
ಈ ಸಂದರ್ಭದಲ್ಲಿ ಕಿನ್ಯ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಮುಸ್ತಫಾ ಅನ್ಸಾರಿ ಅಲ್ ಫಲಕಿ, ಜಮಾಅತ್ ಅಧ್ಯಕ್ಷ ಅಬೂಸಾಲಿ ಹಾಜಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ, ಕೋಶಾಧಿಕಾರಿ ಸಾಧು ಕುಂಞಿ ಸಾಗ್ ಬಾಗ್ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಉಪಾಧ್ಯಕ್ಷ ರಾದ ಇಬ್ರಾಹಿಂ ಕೂಡಾರ, ಹಮೀದ್ ಕಿನ್ಯ, ಅಬ್ಬು ಹಾಜಿ ಚಾದಿ ಪಡ್ಪು, ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಸಾಗ್, ಮುಹಮ್ಮದ್ ಹಾಜಿ ಚಾಕಟ ಪಡ್ಪು, ಕ್ಯಾಂಟೀನ್ ಉಸ್ತುವಾರಿ ಮುಹಮ್ಮದ್ ನಡುದಾರಿ, ಇಮ್ತಿಯಾಜ್ ಸಾಗ್, ಕುತುಬಿಯ ಹಳೆ ವಿದ್ಯಾರ್ಥಿ ಸಮಿತಿ ಅಧ್ಯಕ್ಷ ಮಹಮ್ಮದ್ ಟಿ.ಎಮ್, ಕಾರ್ಯದರ್ಶಿ ನಝೀರ್ ಕೋಶಾಧಿಕಾರಿ ಬಾವು ಜೆ.ಕೆ. ಉಪಸ್ಥಿತರಿದ್ದರು.

Exit mobile version