ಉಳ್ಳಾಲ: ಕರ್ನಾಟಕ ಸಲಫಿ ಅಸೋಸಿಯೇಷನ್ (ರಿ.), ಮಂಗಳೂರು ಇದರ ಅಧೀನದ ಕುರ್’ಆನ್–ಹದೀಸ್ ಲರ್ನಿಂಗ್ ಸ್ಕೂಲ್ ವತಿಯಿಂದ ಕುರ್’ಆನ್ ಸಮ್ಮೇಳನ–2026 ಉಳ್ಳಾಲದ ತಾಜ್ ಮಹಲ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕುರ್’ಆನ್–ಹದೀಸ್ ಲರ್ನಿಂಗ್ ಸ್ಕೂಲ್ ಪರೀಕ್ಷೆ–2026ರ ಫಲಿತಾಂಶದಲ್ಲಿ. ರ‍್ಯಾಂಕ್ ವಿಜೇತರಿಗೆ ಬಹುಮಾನ ಹಾಗೂ ಪರೀಕ್ಷಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ನಡೆಸಲಾಯಿತು.
ಪ್ರಥಮ ರ‍್ಯಾಂಕ್ ಆಯಿಶಾ ಅಕೀಫಾ, ಕಲ್ಲಾಪು, ದ್ವಿತೀಯ ರ‍್ಯಾಂಕ್ ಆಶುರಾ, ಕೊಣಾಜೆ ಮತ್ತು ತೃತೀಯ ರ‍್ಯಾಂಕ್ ಮರ್ಯಮ್, ಕೆ.ಸಿ.ರೋಡ್ ಪಡೆದರು. ಆಯಿಶತುಲ್ ಸಫ್ವತ್ ಹನೀಫ್, ದೇರ್ಳಕಟ್ಟೆ, ನಸೀಬಾ, ನಾಟೆಕಲ್, ಖದೀಜ ಅಶ್ಯಮ್, ಮಂಗಳೂರು ಮತ್ತು ಖದೀಜ ಹನಿಯ್ಯ ಉಳ್ಳಾಲ ಸಮಾಧಾನಕರ ಬಹುಮಾನ ಪಡೆದರು.
ಕುರ್’ಆನ್ ಕಲಿಕೆಯ ಪ್ರಾಮುಖ್ಯತೆಯನ್ನು ಮೌಲವಿ ಶಿಹಾಬ್ ಎಡಕ್ಕರ ವಿವರಿಸಿದರು. ಮೌಲವಿ ಮುಜಾಹಿದ್ ಅಲ್-ಹಿಕಮಿ, ಮೌಲವಿ ಅಬೂಬಕ್ಕರ್ ನಝೀರ್ ಸಲಫಿ, ಮೌಲವಿ ಮುಹಮ್ಮದ್ ಇಜಾಝ್ ಸ್ವಲಾಹಿ, ಹಫೀಝ್ ಸ್ವಲಾಹಿ ಮತ್ತು ಖಲೀಲ್ ತಲಪಾಡಿ ಉಪನ್ಯಾಸ ನೀಡಿದರು.