ಕಾಸರಗೋಡು : ತಿರುವೋಣಂ ಬಂಪರ್ ಲಾಟರಿಯ ಎರಡನೇ ಬಹುಮಾನ ರೂ.1 ಕೋಟಿ ದ.ಕ.ಜಿಲ್ಲೆಯ ಸಮೀಪದ ಬಂಟ್ವಾಳದ ಪಣೋಲಿಬೈಲ್ ನಿವಾಸಿ ರೋಹಿತ್ ಅವರಿಗೆ ಲಭಿಸಿದೆ.
ಅದೃಷ್ಟ ಟಿಕೆಟ್‌ನೊಂದಿಗೆ ರೋಹಿತ್ ಅವರು ಸಬ್ ಏಜೆಂಟ್ ಮಂಜುನಾಥ್ ಅವರೊಂದಿಗೆ ಕಾಸರಗೋಡಿನ ನ್ಯೂ ಲಕ್ಕಿ ಸೆಂಟರ್ ಏಜೆನ್ಸಿಗೆ ಭೇಟಿ ನೀಡಿ, ತಮ್ಮ ಟಿಕೆಟ್‌ಗೆ ಅದೃಷ್ಟ ತಂದ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಒಂದೇ ಟಿಕೆಟ್ ಮೂಲಕ ಕೋಟಿ ರೂಪಾಯಿ ಬಹುಮಾನ ಕರ್ನಾಟಕದ ಪಾಲಾಗಿರುವುದು ಲಾಟರಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ರೋಹಿತ್ ಅವರಿಗೆ ಬಹುಮಾನ ಲಭಿಸಿದ ಸುದ್ದಿ ತಿಳಿಯುತ್ತಿದ್ದಂತೆ ನ್ಯೂ ಲಕ್ಕಿ ಸೆಂಟರ್‌ನಲ್ಲೂ ಸಂಭ್ರಮದ ವಾತಾವರಣ ನಿರ್ಮಾಣವಾಯಿತು.