Site icon Ullalavani

ದಾಮೋದರ ಆರ್.ಸುವರ್ಣ ಎಜುಕೇಶನ್ ಟ್ರಸ್ಟ್ ವತಿಯಿಂದ: ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ

ಮಂಗಳೂರು: ದಾಮೋದರ ಸುವರ್ಣ 102ನೇ ಜನ್ಮಜಯಂತಿ ಸ್ಮರಣೆ ಯೊಂದಿಗೆ ದಾಮೋದರ ಆರ್.ಸುವರ್ಣ ಎಜುಕೇಶನ್ ಟ್ರಸ್ಟ್ ವತಿಯಿಂದ ಬಿಲ್ಲವ ಸಮಾಜದ ಬಡ ಕುಟುಂಬದ ವೃತ್ತಿಪರ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗು ತ್ತಿದ್ದು, ಅರ್ಜಿ ಆಹ್ವಾನಿಸಲಾಗಿದೆ.


ಮಂಗಳೂರಿನ ಉಜ್ಯೋಡಿ ಮಹಾಕಾಳಿ ದೇವಸ್ಥಾನದ ಎದುರು ಇರುವ ದಾಮೋದರ ಸುವರ್ಣ ಎಜುಕೇಶನ್ ಟ್ರಸ್ಟ್ ಕಚೇರಿ (ಪೆಟ್ರೋಲ್ ಬಂಕ್ ಹತ್ತಿರ)ಯಲ್ಲಿ ಅರ್ಜಿ ಫಾರಂ ನೀಡಲಾಗುವುದು.
ವಿದ್ಯಾರ್ಥಿ ವೇತನ ಪಡೆಯಲು ಬಿಲ್ಲವ ಸಮಾಜದ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕನಿಷ್ಠ ಶೇ.75 ಅಂಕದಲ್ಲಿ ತೇರ್ಗಡೆಯಾಗಿ ರುವ ಮಾರ್ಕ್ಸ್ ಕಾರ್ಡ್ ಪ್ರತಿ, ಬಿಪಿಎಲ್ ಕಾರ್ಡ್, ಸ್ಥಳೀಯ ಬಿಲ್ಲವ ಸಂಘದ ಶಿಫಾರಸಿನೊಂದಿಗೆ ಅರ್ಜಿಯನ್ನು ಅ.25 ರೊಳಗೆ ಟ್ರಸ್ಟ್‌ನ ಕಚೇರಿಗೆ ಸಲ್ಲಿಸಬೇಕು. ಬಳಿಕ ಸೂಕ್ತ ಪರಿಶೀಲನೆ ನಡೆಸಿ ಫಲಾನು ಭವಿಗಳನ್ನು ಆಯ್ಕೆ ಮಾಡಿ, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು. 500ಕ್ಕೂ ಮಿಕ್ಕಿ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಿತರಣೆ ನ.29ರಂದು ಬೆಳಗ್ಗೆ 10 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ನಡೆಯಲಿದೆ.

Exit mobile version