Site icon Ullalavani

ಬಾಲ್ಕನಿಯ ತಡೆಗೋಡೆ ಕುಸಿತ ಪ್ರಕರಣ: ವಿದ್ಯಾರ್ಥಿಯ ಕುಟುಂಬಕ್ಕೆ ಪರಿಹಾರ ನೀಡಲು ಲೀಗ್ ಮನವಿ

ಮಂಗಳೂರು:ನಗರದ ಖಾಸಗಿ ಸಭಾಂಗಣದ ಬಾಲ್ಕನಿಯ ತಡೆಗೋಡೆ ಕುಸಿದು ಮೃತಪಟ್ಟ ವಿದ್ಯಾರ್ಥಿಯ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಗಾಯಗೊಂಡಿರುವ ವಿದ್ಯಾರ್ಥಿಗಳ ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಲೀಗ್ ದ.ಕ.ಜಿಲ್ಲಾ ಸಮಿತಿಯು ದ.ಕ.ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.


ಲೀಗ್‌ ಜಿಲ್ಲಾಧ್ಯಕ್ಷ ಸಿ. ಅಬ್ದುಲ್ ರಹ್ಮಾನ್, ಕೋಶಾಧಿಕಾರಿ ರಿಯಾಝ್ ಹರೇಕಳ, ಯೂತ್ ಲೀಗ್ ರಾಜ್ಯ ಕಾರ್ಯದರ್ಶಿ ಶಬೀ‌ರ್ ತಲಪಾಡಿ, ಜಿಲ್ಲಾ ಮುಖಂಡರಾದ ಹಾಜಿ ಕೆ.ಸಿ. ಖಾದರ್, ಪಿ.ಕೆ. ಸಯ್ಯದ್ ಬಂಗಾರಕಟ್ಟೆ, ಉಪಾಧ್ಯಕ್ಷ ಎಚ್. ಮುಹಮ್ಮದ್ ಇಸ್ಮಾಯಿಲ್ ಬಂದರ್, ಕರಾಮತ್ ಕುಟ್ಟಾಡಿ, ರಫೀಕ್ ಬೆಂಗಳೂರು, ಫಯಾಝ್ ಅರ್ಕುಳ, ಹೌರ ಪಾಂಡೇಶ್ವರ ಉಪಸ್ಥಿತರಿದ್ದರು.

Exit mobile version